ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಬಾರದ ಲೋಕಕ್ಕೆ ಬಾಲಕ ಆಕಾಶನ ಪಯಣ!

ನವಲಗುಂದ: ಆಟ ಆಡಿಕೊಂಡು, ಪಾಠ ಕೇಳಬೇಕಾದ ವಯಸ್ಸಿನಲ್ಲಿ ಬಾರದ ಲೋಕಕ್ಕೆ ತೆರಳಿದ ಆಕಾಶ. ಯಾರಿಗೂ ಇಂತಹ ನೋವು ಕೊಡಬೇಡ ಎಂದು ದೇವರಲ್ಲಿ ಬೇಡಿಕೊಂಡ ಪೋಷಕರ ಕೂಗು, ಪ್ರತಿ ಗ್ರಾಮಸ್ಥರ ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ದೇವರಿಗೆ ಶಾಪ ಹಾಕುವುದನ್ನು ನೋಡಲು ಎಂತವರಿಂದಲೂ ಸಾಧ್ಯವಿಲ್ಲ.

ಹೌದು..ಪಟ್ಟಣದ ಬಸ್ತಿ ಪ್ಲಾಟ್ ನಲ್ಲಿ ಇರುವ ಖಾಸಗಿ ಶಿಕ್ಷಣ ಸಂಸ್ಥೆಯಾದ ಶ್ರೀ ವಿದ್ಯಾಜ್ಯೋತಿ ಪ್ರಾಥಮಿಕ ಶಾಲೆಯಲ್ಲಿ ನಿನ್ನೆ ಬಾಲಕನೋರ್ವ ಶಾಲಾ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ್ದ ಘಟನೆಯ ಹಿನ್ನಲೆಯಲ್ಲಿ ಇಂದು ಆ ಬಾಲಕನ ಅಂತ್ಯಸಂಸ್ಕಾರ ಜರುಗಿತು.

ಬಾಲಕ ಆಕಾಶನ ಹುಟ್ಟೂರಾದ ತಾಲೂಕಿನ ಶಾನವಾಡ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ಜರುಗಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆಗೆ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಬಾಲಕನಿಗೆ ಅಂತಿಮ ನಮನ ಸಲ್ಲಿಸಲಾಯಿತು. ಅಂತ್ಯಸಂಸ್ಕಾರದ ವೇಳೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

-ಶಂಕರಯ್ಯ ಸುಭೇದಾರಮಠ, ಪಬ್ಲಿಕ್ ನೆಕ್ಸ್ಟ್ ನವಲಗುಂದ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

19/06/2026 10:32 pm

Cinque Terre

73.87 K

Cinque Terre

3

ಸಂಬಂಧಿತ ಸುದ್ದಿ