ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಅಪಘಾತ ತಪ್ಪಿಸಲು ಸಮೀಕ್ಷೆ ನಡೆಸಿ 150 ಕ್ಕೂ ಹೆಚ್ಚು ಬ್ಲಾಕ್ ಸ್ಪಾಟ್ ಗುರುತಿಸಿದೆ. ಸಮೀಕ್ಷೆ ನಡೆಸಿ ಲೋಕೋಪಯೋಗಿ ಇಲಾಖೆಗೆ ವರದಿ ಸಲ್ಲಿಕೆ ಮಾಡಿದ್ದು, ರಾಜ್ಯದಲ್ಲಿಯೇ ಮೊದಲ ಬಾರಿಗೆ ಇಂತಹದೊಂದು ಸಮೀಕ್ಷೆ ನಡೆಸಿದೆ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKSRTC) ಉತ್ತರ ಕರ್ನಾಟಕದ ಏಳು ಜಿಲ್ಲೆಗಳ ಜೀವನಾಡಿ. ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಸಮೀಕ್ಷೆ ನಡೆಸಿ ಅಪಘಾತ ವಲಯ (ಆಕ್ಸಿಡೆಂಟ್ ರೋನ್ ಅಥವಾ ಬ್ಲಾಕ್ ಸ್ಪಾಟ್)ಗಳನ್ನ ಪತ್ತೆ ಮಾಡಿದೆ. ಹೌದು.. ಈ ಸ್ಥಳಗಳನ್ನು ಅಭಿವೃದ್ಧಿ ಪಡಿಸಿದರೆ ಅಪಘಾತಗಳನ್ನ ನಿಯಂತ್ರಿಸಬಹುದು ಎಂದು ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದೆ. ಸರ್ಕಾರಿ ಬಸ್ ಸೇರಿದಂತೆ ಇತರೆ ವಾಹನಗಳ ಸಂಭವನೀಯ ಅಪಘಾತಗಳನ್ನ ನಿಯಂತ್ರಿಸಲು ಮಾಡಿದ ಸಮೀಕ್ಷೆ.
ಇನ್ನೂ ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಗದಗ, ಹಾವೇರಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಒಟ್ಟು 9 ವಿಭಾಗಗಳನ್ನ ಒಳಗೊಂಡರುವ ಸಂಸ್ಥೆಯಾಗಿದ್ದು, ಈ ವಿಭಾಗಗಳಲ್ಲಿ ರಾಜ್ಯ, ರಾಷ್ಟ್ರೀಯ ಹೆದ್ದಾರಿ, ಜಿಲ್ಲಾ ರಸ್ತೆಗಳು ಮತ್ತು ಸಾಮಾನ್ಯ ರಸ್ತೆಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆ ನಡೆಸಿ ರಾಷ್ಟ್ರೀಯ ಹೆದ್ದಾರಿಯ ರಸ್ತೆಗಳ 30 ಪ್ರದೇಶ ಒಳಗೊಂಡು ಒಟ್ಟು 150 ಸ್ಥಳಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ ಎಂಬುದನ್ನು ಪತ್ತೆ ಹಚ್ಚಿದೆ. ಆರು ಜಿಲ್ಲೆಗಳ 150 ಅಪಘಾತ ಸ್ಥಳಗಳ ಪಟ್ಟಿಯಲ್ಲಿ ರಾಜ್ಯ ಹೆದ್ದಾರಿಯ ಚಿಕ್ಕೋಡಿ ವಿಭಾಗದಲ್ಲಿ 29 ಸ್ಥಳಗಳು ಹಾಗೂ ಹುಬ್ಬಳ್ಳಿ ಸಿಟಿಯಲ್ಲಿ 15 ಸ್ಥಳಗಳು ಇರುವುದು ಬೆಳಕಿಗೆ ಬಂದಿದೆ. ಹಾಗೆಯೇ ಉತ್ತರ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ 17 ಕಡೆಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತವೆ ಎಂಬುದು ಬಹಿರಂಗ ಪಡಿಸಲಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/06/2026 03:03 pm
LOADING...