ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೋಲ್‌ ಗುಂಬಜ್ ರೈಲು ಮಾರ್ಗದಲ್ಲಿ ಬದಲಾವಣೆ - ಹುಬ್ಬಳ್ಳಿ ಸೌತ್ ಸ್ಟೇಷನ್ ನಿಂದ ಪ್ರಯಾಣ ಅಸಾಧ್ಯ..?

ಹುಬ್ಬಳ್ಳಿ: ಭಾರತೀಯ ರೈಲ್ವೆಯ ನೈಋತ್ಯ ರೈಲ್ವೇ ವಲಯವೂ ಒಂದಿಲ್ಲೊಂದು ಜನಪರ ಕಾರ್ಯದ ಮೂಲಕ ಜನಾನುರಾಗಿಯಾಗಿ ಕೆಲಸ ಮಾಡುತ್ತಿದೆ. ರೈಲ್ವೆ ಸೇವೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಸಾಕಷ್ಟು ಶ್ರಮ ವಹಿಸುತ್ತಿದೆ. ಆದರೆ ಈಗ ಗೋಲ್‌ ಗುಂಬಜ್ ರೈಲಿನ ವಿಷಯದಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ಅಪಸ್ವರ ಕೇಳಿ ಬಂದಿದ್ದು, ಹುಬ್ಬಳ್ಳಿ ಭಾಗದ ಜನರಿಗೆ ಉಪಯೋಗ ಆಗುವುದೇ ಅನುಮಾನ ಎಂಬುವಂತಾಗಿದೆ.

ರೈಲು ಸಂಖ್ಯೆ 16535 ಮೈಸೂರು-ಪಂಡರಾಪುರ ಹಾಗೂ ರೈಲು ಸಂಖ್ಯೆ 16536 ಪಂಡರಾಪುರ-ಮೈಸೂರು ಮಾರ್ಗದಲ್ಲಿ ಸಂಚರಿಸುತ್ತಿದ್ದ ಗೋಲ್ ಗುಂಬಜ್ ರೈಲು ಸಂಚಾರವನ್ನು ಗದಗ ಬೈ ಪಾಸ್ ಹಾಗೂ ಹುಬ್ಬಳ್ಳಿ ದಕ್ಷಿಣ ಭಾಗದ ಮೂಲಕ ಸಂಚರಿಸುವಂತೆ ಬಿಜಾಪುರದ ಸಂಸದರಾದ ರಮೇಶ್ ಜಿಗಜಿಣಗಿ ಮತ್ತು ಬಾಗಲಕೋಟೆ ಸಂಸದರಾದ ಪಿಸಿ ಗದ್ದಿಗೌಡರ್ ರವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರಿಗೆ ವಿನಂತಿಸಿದ್ದರು. ಆದರೆ ಈಗ ಈ ರೈಲು ಹುಬ್ಬಳ್ಳಿಯ ಹೊರವಲಯದ ಸೌತ್ ಸ್ಟೇಶನ್ ಮೂಲಕ ಪ್ರಯಾಣ ಬೆಳೆಸುವುದು ಹುಬ್ಬಳ್ಳಿ ಹಾಗೂ ಹುಬ್ಬಳ್ಳಿ ಭಾಗದ ಜನರಿಗೆ ಕಿಂಚಿತ್ತೂ ಪ್ರಯೋಜನ ಆಗುವುದಿಲ್ಲ. ಅಲ್ಲದೇ ಸಿಟಿಯಿಂದ ಬಹುದೂರವಿರುವುದು ಮಾತ್ರವಲ್ಲದೆ ಯಾವುದೇ ಆಟೋ, ನಗರ ಸಾರಿಗೆ ಸೌಕರ್ಯವಿಲ್ಲದೇ ಇರುವ ಸೌತ್ ಸ್ಟೇಷನ್ ನಿಂದ ಜನರು ಹತ್ತುವುದು ಇಳಿಯುವುದು ದುಸ್ತರವಾಗಲಿದೆ. ಬದಲಿಗೆ ರೈಲು ಪ್ರಯಾಣವನ್ನು ಹುಬ್ಬಳ್ಳಿಯ 6-7-8 ಪ್ಲಾಟ್‌ ಫಾರಂವರೆಗೂ ವಿಸ್ತರಣೆ ಮಾಡಬೇಕು ಎಂಬುದು ಜನರ ಆಗ್ರಹವಾಗಿದೆ.

ಮೈಸೂರು - ಬೆಂಗಳೂರು - ಪಂಡರಾಪುರ (ಮಹಾರಾಷ್ಟ್ರ) ಗೋಲ್ ಗುಂಬಜ್ ರೈಲು ಗದಗ ಹಾಗೂ ಹುಬ್ಬಳ್ಳಿ ನಿಲ್ದಾಣದ ಬದಲಾಗಿ, ಗದಗ ಬೈಪಾಸ್ ಹಾಗೂ ಹುಬ್ಬಳ್ಳಿ ದಕ್ಷಿಣದ ಮೂಲಕ ಮುಂಗಡ ರೈಲ್ವೆ ಕಾಯ್ದಿರಿಸಿದ (Advance Reserv Period) ದಿನಾಂಕಗಳ ಬಳಿಕ ನೂತನ ರೈಲ್ವೆ ಮಾರ್ಗದ ಮೂಲಕ ಸಂಚರಿಸಲಿದೆ. ಇದರಿಂದ ಹುಬ್ಬಳ್ಳಿ ಜನರಿಗೆ ಯಾವುದೇ ಲಾಭ ದೊರೆಯುವುದಿಲ್ಲ. ಆದ್ದರಿಂದ ಮತ್ತೊಮ್ಮೆ ಪರಿಷ್ಕರಿಸಿ ಹುಬ್ಬಳ್ಳಿಯ ಪ್ರಮುಖ ನಿಲ್ದಾಣದವರೆಗೆ ವಿಸ್ತರಣೆ ಮಾಡಬೇಕು ಎಂಬುವುದು ಪ್ರಜ್ಞಾವಂತ ನಾಗರಿಕರ ಆಗ್ರಹ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

20/06/2026 05:07 pm

Cinque Terre

15.91 K

Cinque Terre

1

ಸಂಬಂಧಿತ ಸುದ್ದಿ