ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕ್ರೀಡಾ ಸಂಕೀರ್ಣ ಶೀಘ್ರವೇ ಉದ್ಘಾಟನೆ: ಪ್ರಧಾನಿ ಸೂಚನೆ ನೀಡಿದ್ದಾರೆಂದ ಸಚಿವ ಜೋಶಿ..!

ಹುಬ್ಬಳ್ಳಿ : ಬಾಕಿ ಉಳಿದಿರುವ ಕಾಮಗಾರಿ 2028ರೊಳಗೆ ಪೂರ್ಣಗೊಳಿಸಲು ಪ್ರಧಾನಿ ಕರೆ ಕೊಟ್ಟಿದ್ದಾರೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಹುಬ್ಬಳ್ಳಿ ಧಾರವಾಡದಲ್ಲಿ ಹಲವು ಕಾಮಗಾರಿ ಯೋಜನೆ ಕೈಗೊಳ್ಳಲಾಗಿದ್ದು, ಅದರಲ್ಲಿ 175ಕೋಟಿ ರೂ. ವೆಚ್ಚದಲ್ಲಿ ಮಲ್ಟಿ ಸ್ಪೋರ್ಟ್ಸ್ ಸೆಂಟರ್ ಕಾಮಗಾರಿ ಕೈಗೊಳ್ಳಲಾಗಿದೆ.

ಈಗಾಗಲೇ ಶೇ.98 ಕಾಮಗಾರಿ ಮುಗಿದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,‌ ಶೇ.91 ಫೈನಾನ್ಸಿಯಲ್ ಆಗಿದೆ. ರಾಜ್ಯದ ಕ್ರೀಡಾ ಸಚಿವರು ಇದರ ನಿರ್ವಹಣೆ ಬಗ್ಗೆ ಕೂಡಲೇ ಎನ್‌ಜಿಒ ಅಥವಾ ಕ್ರೀಡಾ ಸಂಸ್ಥೆಗೆ ನೀಡಬೇಕು.

ಒಂದೇ ಬಾರಿಗೆ ವಿವಿಧ ಬಗೆಯ ಕ್ರೀಡೆಗಳನ್ನು ನಡೆಸಬಹುದು. ಎಂಬಿಸಿಯಸ್ ಯೋಜನೆ ಆಗಿದೆ. ಸರ್ಕಾರ ಬೇಗನೆ ಮುಗಿಸಲಿ. ಉದ್ಘಾಟನೆಗೆ ದಿನ ನಿಗದಿಪಡಿಸಿಲ್ಲ ಎಂದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

20/06/2026 04:40 pm

Cinque Terre

5.62 K

Cinque Terre

0

ಸಂಬಂಧಿತ ಸುದ್ದಿ