ಧಾರವಾಡ: ಧಾರವಾಡ ತಾಲೂಕಿನ ಅಮ್ಮಿನಬಾವಿ ಬಳಿ ಕಲ್ಲು ಕ್ವಾರಿಗೆ ಈಜಲೆಂದು ಹೋಗಿದ್ದ ಯುವಕ ಈಜು ಬಾರದೇ ಮುಳುಗಿ ಸಾವನ್ನಪ್ಪಿದ್ದಾನೆ. ಮರೇವಾಡ ಗ್ರಾಮದ ರಾಜು ಕಡಿದಾಳ ಎಂಬ ಯುವಕನೇ ಸಾವಿಗೀಡಾದವನು ಎಂದು ಗೊತ್ತಾಗಿದೆ.
ಕಳೆದ ಎರಡು ದಿನಗಳ ಹಿಂದೆ ಈತ ಈಜಲೆಂದು ಕಲ್ಲು ಕ್ವಾರಿಗೆ ಹೋಗಿದ್ದ. ಈ ವೇಳೆ ಈಜು ಬರದೇ ಆತ ನೀರಿನಲ್ಲಿ ಮುಳುಗಿದ್ದ. ಈತ ನೀರಿನಲ್ಲಿ ಮುಳುಗಿದ ವಿಷಯ ಯಾರಿಗೂ ಗೊತ್ತಾಗಿರಲಿಲ್ಲ. ಎರಡು ದಿನಗಳಿಂದ ಆತ ಮನೆಗೆ ಬಾರದೇ ಇದ್ದಿದ್ದರಿಂದ ಆತನಿಗಾಗಿ ಹುಡುಕಾಟ ನಡೆಸಲಾಗಿತ್ತು.
ಆದರೆ, ಬುಧವಾರ ಶವ ನೀರಿನಲ್ಲಿ ತೇಲಾಡುತ್ತಿದುದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಶವ ಮೇಲೆತ್ತಿದಾಗ ಆತ ರಾಜು ಕಡಿದಾಳ ಎಂದು ಗೊತ್ತಾಗಿದೆ. ಈ ಸಂಬಂಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
18/06/2026 07:40 pm
LOADING...