ನವಲಗುಂದ: ರಾಜ್ಯ ಸರ್ಕಾರದ ಮಹತ್ತರ ಯೋಜನೆಗಳಾದ ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬ ಫಲಾನುಭವಿಗೂ ತಲುಪಬೇಕು ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಬಾಕಿ ಇರುವ ಫಲಾನುಭವಿಗಳಿಗೆ ಯೋಜನೆ ತಲುಪಿಸುವ ಕಾರ್ಯ ಬೇಗನೆ ಮುಗಿಯಬೇಕು ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡ್ರ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಜರುಗಿದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗೃಹಲಕ್ಷ್ಮಿ ಯೋಜನೆ ಕುರಿತಂತೆ ರಾಜ್ಯ ಸರ್ಕಾರ ಸಭೆ ಕೈಗೊಂಡು ಮುಂದಿನ ಕ್ರಮಗಳ ಕುರಿತು ಮಾಹಿತಿ ಬಿಡುಗಡೆ ಮಾಡಿದ ನಂತರ ಹಣ ಬಿಡುಗಡೆ ಆಗುವುದು ಎಂದರು.ಈ ವೇಳೆ ತಾಪಂ ಇಓ ರವೀಂದ್ರಗೌಡ ಪಾಟೀಲ, ಹನಮರಡ್ಡಿ ರೂಗಿ, ಮಲ್ಲಿಕಾರ್ಜುನ ಗುಜ್ಜಳ, ಈರಣ್ಣ ಅಂಗಡಿ, ಆನಂದ ಜಕ್ಕನಗೌಡರ, ಕಲ್ಮೇಶ ತಲವಾಯಿ, ಈರಣ್ಣ ಶಿಡಗಂಟಿ, ಚಂದ್ರಣ್ಣ ಅಣ್ಣಿಗೇರಿ ಸೇರಿದಂತೆ ಅನೇಕರು ಇದ್ದರು.
Kshetra Samachara
20/06/2026 11:46 am
LOADING...