ನವಲಗುಂದ: ಕರ್ನಾಟಕ ರಾಜ್ಯ ನೀರು ಬಳಕೆದಾರರ ಸಹಕಾರ ಸಂಘಗಳ ರಾಜ್ಯ ಮಟ್ಟದ ಶೃಂಗ ಮಹಾಮಂಡಳ ನಿಯಮಿತ, ಬೆಂಗಳೂರು ಇದರ ನೂತನ ಆಡಳಿತ ಮಂಡಳಿಗೆ ಚುನಾವಣೆ ನಿಗದಿಯಾಗಿತ್ತು.
ಶೃಂಗ ಮಹಾಮಂಡಳದ ನೂತನ ಆಡಳಿತ ಮಂಡಳಿಯ ನಿರ್ದೇಶಕ ಚುನಾವಣೆಯಲ್ಲಿ ಅವಿರೋಧವಾಗಿ ನಿರ್ದೇಶಕರ ಹುದ್ದೆಗೆ ಆಯ್ಕೆಯಾದ ಮಲಪ್ರಭಾ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳ ನಿಯಮಿತ, ನವೀಲತೀರ್ಥ, ಸವದತ್ತಿ ಇದರ ಅಧ್ಯಕ್ಷರಾದ ಸದುಗೌಡ ಪಾಟೀಲ ಅವರಿಗೆ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ಸನ್ಮಾನಿಸಿ ಅಭಿನಂದಿಸಿದರು.
ತಾಲೂಕಿನ ಬೆಳವಟಗಿ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದ ಎಸ್.ಎ. ಪಾಟೀಲ (ಸದುಗೌಡ ಪಾಟೀಲ) ಅವರು ರಾಜ್ಯ ಮಟ್ಟದ ಮಹಾಮಂಡಳಕ್ಕೆ ಆಯ್ಕೆಯಾಗಿರುವದು ಸಂತೋಷದ ವಿಷಯ. ಇವರಿಗೆ ಕ್ಷೇತ್ರದ ಹಾಗೂ ಮಹಾಮಂಡಳದ ಎಲ್ಲ ಸದಸ್ಯರುಗಳಿಗೆ ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಹಾಗೂ ಜಲಸಂಪನ್ಮೂಲ ಸಚಿವರಾದ ರಾಮಲಿಂಗಾರೆಡ್ಡಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ವಿಜಯ ಕುಲಕರ್ಣಿ, ವಿ.ಎ. ಚಿಕ್ಕಮಠ, ಜಿ.ಐ. ಕುರಹಟ್ಟಿ, ಡಿ.ವಾಯ್. ಕಾಡಪ್ಪನವರ, ಬಿ.ಕೆ. ಡುಮ್ಮಾಳೆ, ಸುರೇಶ ನಿಡವಣಿ, ಬಿ.ವಾಯ್. ಬೂದಿಹಾಳ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
Kshetra Samachara
19/06/2026 07:57 pm
LOADING...