ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪ್ರತಿಷ್ಠಿತ 'ಮಿಸ್ ಯೂನಿವರ್ಸ್ ಇಂಡಿಯಾ' ಸೌಂದರ್ಯ ಸ್ಪರ್ಧೆಯ ಅಂತಿಮ ಘಟ್ಟಕ್ಕೆ ಕನ್ನಡತಿ ಸ್ಪೂರ್ತಿ ಶೆಟ್ಟಿ

ಉಡುಪಿ: ಉಡುಪಿಯಲ್ಲಿ ಹುಟ್ಟಿ ಬೆಳೆದ ಸಾಮಾನ್ಯ ಕುಟುಂಬದ ಹೆಣ್ಣುಮಗಳು ಸ್ಪೂರ್ತಿ ಶೆಟ್ಟಿ, ಇದೀಗ ಪ್ರತಿಷ್ಠಿತ 'ಮಿಸ್ ಯೂನಿವರ್ಸ್ ಇಂಡಿಯಾ' ಸೌಂದರ್ಯ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾಗುವ ಮೂಲಕ ಇಡೀ ಜಿಲ್ಲೆ ಮತ್ತು ರಾಜ್ಯವೇ ಹೆಮ್ಮೆಪಡುವಂತೆ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮದ ಜೊತೆ ಖುಷಿ ಹಂಚಿಕೊಂಡ ಸ್ಪೂರ್ತಿ ಶೆಟ್ಟಿ, ತಿಂಗಳ ಹಿಂದೆ ರಿಸಲ್ಟ್ ಬಂದಿದೆ. ಈಗ ಫೈನಲ್ ಗೆ ತಯಾರಿ ನಡೆಸುತ್ತಿದ್ದೇನೆ. ಈ ಸ್ಪರ್ಧೆಗೆ ಆಯ್ಕೆಯಾದ ಮೊದಲ ಉಡುಪಿಯ ಪ್ರತಿಭೆ ನಾನು.ಇಲ್ಲೇ ಹುಟ್ಟಿ, ಇಲ್ಲೇ ಕಲಿತು ಇಲ್ಲೇ ಕೆಲಸ ಮಾಡುತ್ತಿದ್ದೇನೆ. ಮುಂದಿನ ತಿಂಗಳು ನಡೆಯುವ ಫೈನಲ್ ನಲ್ಲಿ ಗೆದ್ದು ಬರುವ ವಿಶ್ವಾಸ ಇದೆ.ಅದಕ್ಕೆ ನಿಮ್ಮೆಲ್ಲರ ಶುಭ ಹಾರೈಕೆ ಬೇಕು ಎಂದು ಹೇಳಿದ್ದಾರೆ.

Edited By :
PublicNext

PublicNext

17/07/2026 06:13 pm

Cinque Terre

13.91 K

Cinque Terre

1

ಸಂಬಂಧಿತ ಸುದ್ದಿ