ಮುಲ್ಕಿ : ಹಳೆಯಂಗಡಿಯಿಂದ ಪಕ್ಷಿಕೆರೆ ಕಡೆಗೆ ಹೋಗುವ ಪ್ರಧಾನ ರಸ್ತೆಯ ಇಂದಿರಾನಗರ ಬಸ್ ನಿಲ್ದಾಣದ ಬಳಿ ರಸ್ತೆಯಲ್ಲಿ ಬೃಹದಾಕಾರದ ಹೊಂಡಗಳು ಸೃಷ್ಟಿಯಾಗಿದ್ದವು. ವಾಹನಗಳು ಸಂಚರಿಸುವಾಗ ಅನೇಕ ಅಪಘಾತಗಳು ಸಂಭವಿಸಿ ಹಲವರು ಗಾಯಗೊಂಡಿದ್ದರು. ಅಲ್ಲದೆ, ವಾಹನಗಳು ಸಂಚರಿಸುವಾಗ ರಸ್ತೆ ಹೊಂಡದಲ್ಲಿದ್ದ ಜಲ್ಲಿ ಕಲ್ಲುಗಳು ಹಾರಿ ಬಸ್‌ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರ ಮೇಲೆ ಬೀಳುತ್ತಿದ್ದು, ಕೆಲವೊಮ್ಮೆ ತಲೆಗೆ ಏಟಾದ ಘಟನೆಗಳೂ ನಡೆದಿದ್ದವು.
ಈ ಬಗ್ಗೆ ಕೂಡಲೇ ಕಾರ್ಯಪ್ರವೃತ್ತರಾದ ಇಂದಿರಾನಗರದ ಫ್ರೆಂಡ್ಸ್ ಕ್ರಿಕೆಟರ್ಸ್ ತಂಡದ ಯುವಕರು ಶ್ರಮದಾನದ ಮೂಲಕ ಡಾಂಬರು ಹಾಗೂ ಜಲ್ಲಿ ಮಿಶ್ರಣ ಬಳಸಿ ಅಪಾಯಕಾರಿ ಹೊಂಡಗಳನ್ನು ಮುಚ್ಚಿದರು.
ಶ್ರಮದಾನದಲ್ಲಿ ಸಾಮಾಜಿಕ ಕಾರ್ಯಕರ್ತ ಅದ್ದಿ ಬೊಳ್ಳೂರು, ಯಶವಂತ ಅಮೀನ್, ರಾಮು, ಅನ್ನಿ ಪೂಜಾರಿ, ಸುರೇಶ್, ಶ್ರೀನಾಥ್ ಲೈಟ್ ಹೌಸ್, ಶಾಮೀರ್ ಮತ್ತಿತರರು ಭಾಗವಹಿಸಿದ್ದರು.
Kshetra Samachara
20/09/2026 10:57 am
LOADING...