ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿದ್ಯುತ್ ತಗುಲಿ ರೈತ ಸಾವು

ಹಡಗಲಿ: ಹೂವಿನಹಡಗಲಿ ತಾಲ್ಲೂಕಿನ ಮಹಾಜನದಹಳ್ಳಿಯಲ್ಲಿ ವಿದ್ಯುತ್ ತಗುಲಿ ರೈತರೊಬ್ಬರು ಮೃತಪಟ್ಟ ಘಟನೆ ಸಂಭವಿಸಿದೆ.

ಪರಸಪ್ಪನವರ ಪ್ರವೀಣ್ (25) ಮೃತಪಟ್ಟ ರೈತ. ಇವರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಬೆಳೆಗೆ ನೀರು ಹಾಯಿಸಲು ತೆರಳಿದ್ದರು. ಈ ಸಂದರ್ಭದಲ್ಲಿ ಮೃತನ ಸ್ನೇಹಿತರು ಜಮೀನಿಗೆ ಬಂದಾಗ ಪ್ರವೀಣ್ ಕಾಣಿಸದಿದ್ದರಿಂದ ಸುತ್ತಮುತ್ತ ಹುಡುಕಾಡಿ, ಬಳಿಕ ಅವರ ದೂರವಾಣಿಗೆ ಕರೆ ಮಾಡಿದ್ದಾರೆ. ಕರೆಗೆ ಸ್ಪಂದಿಸದಿದ್ದಾಗ ಗಾಬರಿಗೊಂಡ ಸ್ನೇಹಿತರು ಮೋಟಾರ್ ಪಂಪ್ ಸೆಟ್ ಬಳಿ ತೆರಳಿ ನೋಡಿದಾಗ, ವಿದ್ಯುತ್ ತಂತಿ ತಗುಲಿ ಪ್ರವೀಣ್ ಸ್ಥಳದಲ್ಲೇ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

"ಸಮಯಕ್ಕೆ ಸರಿಯಾಗಿ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡದ ಕಾರಣ, ರೈತರು ಅನಿವಾರ್ಯವಾಗಿ ಪಂಪ್ ಸೆಟ್ ಬಳಿ ತೆರಳಿ ವಿದ್ಯುತ್ ಪರೀಕ್ಷಿಸುವ ಸಂದರ್ಭದಲ್ಲಿ ಇಂತಹ ಅವಘಡಗಳು ಸಂಭವಿಸುತ್ತಿವೆ. ಈ ಘಟನೆಗೆ ಜೆಸ್ಕಾಂ (GESCOM) ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯೇ ನೇರ ಕಾರಣ" ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By :
PublicNext

PublicNext

20/07/2026 02:35 pm

Cinque Terre

10.85 K

Cinque Terre

0

ಸಂಬಂಧಿತ ಸುದ್ದಿ