ವಿಜಯಪುರ: ನಾನು ಮುಸ್ಲಿಂ ಇದ್ದರೂ ಹಿಂದೂ ಜನ ನನಗೆ ಮತ ಹಾಕಿದ್ದಾರೆ. ಹಿಂದೂ ಮುಸ್ಲಿಂ ಎರಡು ನನ್ನ ಕಣ್ಣು ಇದ್ದ. ಹಾಗೆ ನಾನು ಎಲ್ಲರನ್ನು ಸಮನಾಗಿ ಕಾಣುತ್ತಿದ್ದೇನೆ. ನಿಮ್ಮ ನಾಟಕ ಬಂದ್ ಮಾಡಿ ಎಂದು ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರೀಫ್ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಗೆ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಹಿಂದೂ-ಮುಸ್ಲಿಂ ಎಂದು ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ನೀವು ಚುನಾವಣೆ ಗೆದ್ದಿದ್ದೀರಿ. ಜನರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿ ಸುಖಾ ಸುಮ್ಮನೆ ವಿವಾದ ಸೃಷ್ಟಿಸಿ ಬೇರೆ ಮಕ್ಕಳನ್ನು ಬಲಿ ಕೊಡಬೇಡಿ. ನೀವು ನೇರವಾಗಿ ಬನ್ನಿ ನಾನು ಒಬ್ಬನೇ ಬರಲು ಸಿದ್ಧನಿದ್ದೇನೆ, ಹಿಂದೂ ಮುಸ್ಲಿಂ ಮಾಡುವುದನ್ನು ಬಿಡಿ ಚುನಾವಣೆ ಇನ್ನೂ ಎರಡು ವರ್ಷವಿದೆ ಎಂದು ಯತ್ನಾಳ್ ವಿರುದ್ಧ ಹರಿ ಹಾಯ್ದರು.
PublicNext
23/07/2026 05:11 pm
LOADING...