ವಿಜಯಪುರ: ಬಿಜೆಪಿಯಲ್ಲಿ ಮಂತ್ರಿ ಸ್ಥಾನ ಪಡೆಯಲು ಹಣದ ವ್ಯವಹಾರ ನಡೆದಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಬಿಜೆಪಿಯಲ್ಲಿ ಮೇಲ್ಮಟ್ಟದಲ್ಲಿ ಹಣದ ವ್ಯವಹಾರ ಇಲ್ಲ ಎಂದು ಹೇಳುತ್ತಾರೆ.
ಆದರೆ ಯಡಿಯೂರಪ್ಪ ಅವರಿಗೆ ಹಣ ನೀಡದೆ ಯಾರಾದರೂ ಮಂತ್ರಿಯಾಗಿದ್ದಾರೆಯೇ? ಸುಮಾರು 15 ಮಂದಿ ಹಣ ಕೊಟ್ಟೇ ಮಂತ್ರಿಗಳಾಗಿದ್ದಾರೆ" ಎಂದು ಬಾಂಬ್ ಸಿಡಿಸಿದರು.
"ಹೈಕಮಾಂಡ್ ಕಳುಹಿಸಿದ್ದ ಪಟ್ಟಿ ಬೇರೆ ಇತ್ತು. ಆದರೆ ಇಲ್ಲಿ ರಾತ್ರೋರಾತ್ರಿ ಪಟ್ಟಿ ಬದಲಾಯಿತು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಕೆಲವರು ರಾತ್ರೋರಾತ್ರಿ ಹಣ ನೀಡಿ ಮಂತ್ರಿಗಳಾಗಿದ್ದಾರೆ" ಎಂದು ಯತ್ನಾಳ್ ಆರೋಪಿಸಿದರು.
ಇದೇ ವೇಳೆ ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, "ಈಗ ಯಡಿಯೂರಪ್ಪ ಅವರನ್ನು ಬೊಮ್ಮಾಯಿ ಬಹಳ ಹೊಗಳುತ್ತಿದ್ದಾರೆ. ಏಕೆಂದರೆ ಅವರ ಮಗನನ್ನು ಶಾಸಕನನ್ನಾಗಿ ಮಾಡಿಸಿಕೊಳ್ಳಬೇಕಾಗಿದೆ.
ಬೊಮ್ಮಾಯಿ ಅವರು 'ಬಸನಗೌಡನನ್ನು ರಾಜಕೀಯಕ್ಕೆ ತಂದದ್ದು ಯಡಿಯೂರಪ್ಪ' ಎಂದು ಹೇಳುತ್ತಿದ್ದಾರೆ. ಆದರೆ ನಾನು ಯಡಿಯೂರಪ್ಪರಿಂದ ಬೆಳೆದವನಲ್ಲ; ಜನರ ಪ್ರೀತಿ ಮತ್ತು ವಿಶ್ವಾಸದಿಂದ ಈ ಸ್ಥಾನಕ್ಕೆ ಬಂದಿದ್ದೇನೆ" ಎಂದು ತಿರುಗೇಟು ನೀಡಿದರು.
PublicNext
04/08/2026 04:00 pm
LOADING...