ಚಿತ್ರದುರ್ಗ: ಕುರಿ ಶೆಡ್‌ಗೆ ಆಕಸ್ಮಿಕ ಬೆಂಕಿ ತಗುಲಿ ಶೆಡ್ ಹೊತ್ತಿ ಉರಿದಿರುವ ಘಟನೆ ಜರುಗಿದೆ. ಚಿತ್ರದುರ್ಗ ಜಿಲ್ಲೆಯ ಚಿಕ್ಕಂದವಾಡಿ ಗ್ರಾಮದಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ಅಗ್ನಿ ಅವಘಡದಲ್ಲಿ 400ಕ್ಕೂ ಹೆಚ್ಚು ಕುರಿ-ಮೇಕೆ, 5 ಸಾವಿರಕ್ಕೂ ಅಧಿಕ ಕೋಳಿ ಮರಿ ಬಲಿಯಾಗಿವೆ. ಗ್ರಾಮದ ಭಾಗ್ಯಮ್ಮ ಎಂಬುವವರ ತೋಟದಲ್ಲಿ ಅಗ್ನಿ ಅವಘಡ ನಡೆದಿದ್ದು, ಅಂದಾಜು 1 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ. ತಡರಾತ್ರಿ ಏಕಾಏಕಿ ಬೆಂಕಿ ತಗುಲಿ ಕುರಿ ಶೆಡ್ ಹೊತ್ತಿ ಉರಿದಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಚಿಕ್ಕಜಾಜೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
PublicNext
29/07/2026 08:35 am
LOADING...