ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಿಲುಗಳಿಗೆ ಜಮೀನಿನಲ್ಲಿ ಅನ್ನ ಇಟ್ಟ ರೈತರು!

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದ್ದು, ಅನ್ನ- ಆಹಾರ ಅರಸಿ ನವಿಲುಗಳು ರೈತನ ಜಮೀನಿಗೆ ಲಗ್ಗೆ ಇಟ್ಟಿದ್ದು, ರೈತರು ನವಿಲುಗಳಿಗೆ ಅನ್ನ ಆಹಾರ ಇಟ್ಟು, ಜೋಪಾನ ಮಾಡಿದ್ದಾರೆ.

ಜಿಲ್ಲೆಯಲ್ಲಿ ಮಳೆಯಾಗದೇ ಬರದ ಛಾಯೆ ತಾಂಡವವಾಡ್ತಿದೆ. ತಾಲೂಕಿನ‌ ಹುಣಸೆಕಟ್ಟೆ ಗ್ರಾಮದಲ್ಲಿ ನವಿಲುಗಳು ಆಹಾರ ಅರಸಿ ರೈತರ ಜಮೀನುಗಳ ಮೊರೆ ಹೋಗ್ತಿವೆ. ಗ್ರಾಮದ ರೈತ ಕಾಂತಪ್ಪ ಎಂಬ ರೈತರ ಜಮೀನಿಗೆ ಎರಡು ನವಿಲುಗಳು ಆಹಾರಕ್ಕಾಗಿ, ನೀರಿಗಾಗಿ ಬರುತ್ತಿವೆ.

ಕೂಡಲೇ ಅಕ್ಕಪಕ್ಕದ ಜಮಿನುಗಳ ರೈತರು ನವಿಲುಗಳಿಗೆ ಅನ್ನ, ಮಂಡಕ್ಕಿ, ನೀರು ಕೊಟ್ಟು ಉಪಚಾರ ಮಾಡಿದ್ದಾರೆ. ರೈತರ ಜಮೀನಿನಲ್ಲಿ ನವಿಲುಗಳು, ಮನೆಯ ಮಕ್ಕಳಂತೆ ಓಡಾಡಿರುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

Edited By : Vinayak Patil
PublicNext

PublicNext

05/08/2026 09:34 pm

Cinque Terre

3.42 K

Cinque Terre

0

ಸಂಬಂಧಿತ ಸುದ್ದಿ