ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ: ಕುಖ್ಯಾತ ಕಳ್ಳರು ಅಂದರ್!

ಚಿಕ್ಕಬಳ್ಳಾಪುರ: ಅಂತಾರಾಜ್ಯ ಕುಖ್ಯಾತ ಕಳ್ಳನನ್ನು ಶಿಡ್ಲಘಟ್ಟ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜುಲೈ 22ರಂದು ಶಿಡ್ಲಘಟ್ಟ ನಗರ ನಿವಾಸಿ ಶ್ರೀನಾಥ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ದೂರು ದಾಖಲಿಸಿಕೊಂಡಿದ್ದ ಪೊಲೀಸರು, ಒಂದು ವಾರದ ಒಳಗೆ ಕಳ್ಳನನ್ನು ಬಂಧಿಸಿದ್ದಾರೆ.

ಬಂಧಿತ ಕಳ್ಳ ಆಂಧ್ರಪ್ರದೇಶದ ಧರ್ಮವರಂ ಮೂಲದ ರಾಮಕೃಷ್ಣ ಎಂದು ತಿಳಿದುಬಂದಿದ್ದು, ಬಂಧಿತನಿಂದ ಸುಮಾರು 2,80,000 ಬೆಲೆಬಾಳುವ ಚಿನ್ನಾಭರಣ, ಬೆಳ್ಳಿ, ನಗದನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ರಾಜ್ಯದ 11 ಪೊಲೀಸ್ ಠಾಣೆಗಳಲ್ಲಿ ಆರೋಪಿ ಮೇಲೆ ಪ್ರಕರಣ ದಾಖಲಾಗಿರೋದು ತಿಳಿದುಬಂದಿದೆ.

Edited By : Vijay Kumar
PublicNext

PublicNext

29/07/2026 01:44 pm

Cinque Terre

4.37 K

Cinque Terre

0

ಸಂಬಂಧಿತ ಸುದ್ದಿ