ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮತ್ತೆ ಗಾಳಿ ಹಾಗೂ ಮಳೆಯ ಅಬ್ಬರ ಜೋರಾಗಿದ್ದು, ಕರಿಕೆ ಸಮೀಪದ 13ನೇ ಮೈಲಿನಲ್ಲಿ ಅಂತರರಾಜ್ಯ ಹೆದ್ದಾರಿಯ ಮೇಲೆ ಬೃಹತ್ ಬಿದಿರು ಬುಡ ಉರುಳಿ ಬಿದ್ದ ಪರಿಣಾಮ ಕೊಡಗು-ಕೇರಳ ಅಂತರರಾಜ್ಯ ಹೆದ್ದಾರಿ ಬಂದ್ ಆಗಿದ್ದು, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡಿತು. ವಾಹನ ಸವಾರರು ಪರದಾಡಿದರು. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಜೆಸಿಬಿ ಯಂತ್ರದ ಸಹಾಯದಿಂದ ರಸ್ತೆಯ ಮೇಲಿದ್ದ ಬಿದಿರನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
Kshetra Samachara
30/07/2026 06:42 am
LOADING...