ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸವಣೂರು: ಸರ್ವರ್ ಸಮಸ್ಯೆ - ಜನಸ್ನೇಹಿ ಕೇಂದ್ರದಲ್ಲಿ ಜನದಟ್ಟಣೆ

ಸವಣೂರು: ಸವಣೂರು ಪಟ್ಟಣದ ಜನಸ್ನೇಹಿ ಕೇಂದ್ರದಲ್ಲಿ ಸಾರ್ವಜನಿಕರ ದಟ್ಟಣೆ ಹೆಚ್ಚಾಗಿದ್ದು, ಬೆಳಗಿನಿಂದಲೇ ವೃದ್ಧರು, ಅಂಗವಿಕಲರು ಹಾಗೂ ಮಹಿಳೆಯರು ಸರದಿಯಲ್ಲಿ ನಿಂತರೂ ಸೇವೆ ಪಡೆಯದೆ ಹಿಂದಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಆದಾಯ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ನಿವಾಸ, ವಾಸ್ತವ್ಯ, ಕುಟುಂಬದ ವಂಶವೃಕ್ಷ, ಕೃಷಿಕ ಪ್ರಮಾಣಪತ್ರ ಹಾಗೂ ಭೂ ದಾಖಲೆಗಳಿಗೆ ಸಂಬಂಧಿಸಿದ ಸೇವೆಗಳಿಗೂ ಇಲ್ಲಿನ ಒಂದೇ ಕೇಂದ್ರವನ್ನು ಅವಲಂಬಿಸಬೇಕಿರುವುದರಿಂದ ತುಂಬಾ ತೊಂದರೆಯಾಗುತ್ತಿದೆ. "ಅಲ್ಲದೆ ಮೂರ್ನಾಲ್ಕು ದಿನಗಳಿಂದ ಬೆಳಿಗ್ಗೆ 8 ಗಂಟೆಗೆ ಕೆಲಸ ಬಿಟ್ಟು ಬರುತ್ತಿದ್ದೇವೆ. ಆದರೆ ಸರ್ವರ್ ಸಮಸ್ಯೆ, ಅದು-ಇದು ಅಂತ ನೆಪ ಹೇಳುತ್ತಿದ್ದಾರೆ" ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ವರದಿ: ರಮೇಶ್ ಸೋಮಕ್ಕನವರ, ಪಬ್ಲಿಕ್ ನೆಕ್ಸ್ಟ್, ಸವಣೂರು

Edited By :
PublicNext

PublicNext

30/07/2026 10:49 am

Cinque Terre

5.69 K

Cinque Terre

0

ಸಂಬಂಧಿತ ಸುದ್ದಿ