ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

"ಸಿದ್ದರಾಮಯ್ಯನವರೇ ನನಗೆ ಗಾಡ್‌ಫಾದರ್": ಸಚಿವ ಸ್ಥಾನ ಕೈತಪ್ಪಿದಕ್ಕೆ ಶಾಸಕ ಶಿವಣ್ಣನವರ್ ಅಸಮಾಧಾನ!

ಹಾವೇರಿ : "ನನಗೆ ಸಚಿವ ಸ್ಥಾನ ಸಿಗದಿರಲು ಯಾರು ಕಾರಣ ಎಂಬುದು ಗೊತ್ತಿಲ್ಲ, ಆದರೆ ನನಗೆ ಸಿದ್ದರಾಮಯ್ಯನವರೇ ಗಾಡ್‌ಫಾದರ್," ಎಂದು ಹಾವೇರಿ ಜಿಲ್ಲೆಯ ಬ್ಯಾಡಗಿ ಕ್ಷೇತ್ರದ ಶಾಸಕ ಬಸವರಾಜ ಶಿವಣ್ಣನವರ್ ತಿಳಿಸಿದ್ದಾರೆ.

ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಉತ್ತರ ಕರ್ನಾಟಕ ಭಾಗದ ಪ್ರಾತಿನಿಧ್ಯದ ಆಧಾರದ ಮೇಲೆ ಶಿವಣ್ಣನವರ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಮಾತುಗಳಿದ್ದವು. ಕೊನೆಯ ಹಂತದವರೆಗೂ ನನ್ನ ಹೆಸರು ಪಟ್ಟಿಯಲ್ಲಿತ್ತು. ಆದರೆ, ಕೊನೆ ಗಳಿಗೆಯಲ್ಲಿ ನನ್ನ ಹೆಸರು ಕೈತಪ್ಪಿದ್ದು ಸಿದ್ದರಾಮಯ್ಯನವರ ಗಮನಕ್ಕೂ ಇಲ್ಲ, ಸಿಎಂ ಗಮನಕ್ಕೂ ಇಲ್ಲ. ಇದು ಹೈಕಮಾಂಡ್‌ನಿಂದಲೇ ಬಂದ ನಿರ್ಧಾರ," ಎಂದು ವಿವರಣೆ ನೀಡಿದರು.

ಮುಂದುವರಿದು ಮಾತನಾಡಿದ ಅವರು, "ಮುಂದಿನ ದಿನಗಳಲ್ಲಿ ಹೈಕಮಾಂಡ್ ಹಾಗೂ ರಾಜ್ಯ ನಾಯಕರು ಒಳ್ಳೆಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಬಲವಾದ ವಿಶ್ವಾಸ ಮತ್ತು ಆಶಾಭಾವನೆ ನನಗಿದೆ. ನನಗೆ ಪಕ್ಷ ಹಾಗೂ ನಾಯಕರ ಮೇಲೆ ಸಂಪೂರ್ಣ ಭರವಸೆ ಇದೆ," ಎಂದು ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು.

Edited By : Somashekar
PublicNext

PublicNext

06/08/2026 10:31 pm

Cinque Terre

2.07 K

Cinque Terre

0