ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: “ನಾನು ಪಾರ್ಟ್ ಟೈಮ್ ಆಕ್ಟರ್ ಅಷ್ಟೇ!” – ಪ್ರಿಯಾಂಕಾ ಉಪೇಂದ್ರ ದಿಲ್ ಖುಲಾಸ್ ಮಾತು!

ಬೆಂಗಳೂರು: ಬೆಳ್ಳಿಪರದೆಯ ಮೇಲೆ ಬಂಗಾಳಿ ಸುಂದರಿಯಾಗಿ ಹೆಜ್ಜೆ ಇಟ್ಟು, ತಮ್ಮ ಅಭಿನಯದ ಮೂಲಕವೇ ಕನ್ನಡಿಗರ ಮನ ಗೆದ್ದು ‘ಕನ್ನಡತಿ’ಯಾಗಿ ನೆಲೆನಿಂತವರು ನಟಿ ಪ್ರಿಯಾಂಕಾ ಉಪೇಂದ್ರ. ಕಳೆದ 25 ವರ್ಷಗಳ ಸುದೀರ್ಘ ಸಿನಿಮಾ ಪಯಣದಲ್ಲಿ ಬರೋಬ್ಬರಿ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಪ್ರಿಯಾಂಕಾ, ತಮ್ಮ ಈ ಅಪರೂಪದ ಹಾಗೂ ರೋಚಕ ಸಿನಿಪಯಣದ ನೆನಪುಗಳನ್ನು 'ಪಬ್ಲಿಕ್ ನೆಕ್ಸ್ಟ್' ಜೊತೆ ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಬಂಗಾಳಿ ಮೂಲದವರಾದರೂ ಕನ್ನಡ ಚಿತ್ರರಂಗ ತಮಗೆ ನೀಡಿದ ಪ್ರೀತಿ, ಉಪೇಂದ್ರ ಅವರೊಂದಿಗಿನ ಬದುಕು ಹಾಗೂ 50 ಸಿನಿಮಾಗಳ ಈ ಸಾಧನೆಯ ಹಾದಿಯಲ್ಲಿ ಎದುರಾದ ಸವಾಲುಗಳ ಬಗ್ಗೆ ಅವರು ಮನಬಿಚ್ಚಿ ಮಾತನಾಡಿದ್ದಾರೆ. ಅಷ್ಟಕ್ಕೂ ತಮ್ಮ ಸುದೀರ್ಘ 25 ವರ್ಷಗಳ ಈ ಯಶಸ್ವಿ ಪಯಣದ ಬಗ್ಗೆ ಪ್ರಿಯಾಂಕಾ ಉಪೇಂದ್ರ ಅವರು ಹೇಳಿದ್ದೇನು? ಅವರ ಬಾಯಲ್ಲೇ ಕೇಳಿಕೊಂಡು ಬರೋಣ, ಬನ್ನಿ!

Edited By :
PublicNext

PublicNext

30/07/2026 05:46 pm

Cinque Terre

84.13 K

Cinque Terre

0

ಸಂಬಂಧಿತ ಸುದ್ದಿ