ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಎಚ್ಐವಿ ಟೆಸ್ಟ್ ಕಡ್ಡಾಯ ಆದೇಶ ಕೊಟ್ಟಿಲ್ಲ- ಯು.ಟಿ.ಖಾದರ್

ಮಂಗಳೂರು: ರಾಜ್ಯದ 7000ಕ್ಕೂ ಅಧಿಕ ಯುವಜನರಲ್ಲಿ ಎಚ್‌ಐವಿ ಪತ್ತೆ ವರದಿ ವಿಚಾರವಾಗಿ ಯಾವುದೇ ರೀತಿಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಎಚ್ಐವಿ ಟೆಸ್ಟ್ ಕಡ್ಡಾಯ ಆದೇಶ ಕೊಟ್ಟಿಲ್ಲ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಮಂಗಳೂರಿನಲ್ಲಿ ಹೇಳಿದ್ದಾರೆ.

ಕಡ್ಡಾಯ ಟೆಸ್ಟ್ ನಡೆಸಲು ಸಾಧ್ಯವೂ ಇಲ್ಲ. ಕೆಲವು ಕಡೆ ಕ್ಯಾಂಪ್ ಮಾದರಿಯಲ್ಲಿ ತಪಾಸಣೆ ಮಾಡುತ್ತೇವೆ. ಆದರೆ ಕಡ್ಡಾಯ ಟೆಸ್ಟ್ ಮಾಡಬೇಕು ಎಂದು ಯಾರಿಗೂ ಒತ್ತಾಯ ಮಾಡುತ್ತಿಲ್ಲ.‌‌ ಹಿಂದಿನ ಅನುಪಾತವಿದೆಯೇ ಹೊರತು ಹೆಚ್ಚು ಅಥವಾ ಕಡಿಮೆಯಾಗಿಲ್ಲ ಎಂದು ನನ್ನ ಇಲಾಖೆಯ ಅಧಿಕಾರಿಗಳು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ ಎಂದರು.

ಈ ಬಗ್ಗೆ ನಾಳೆ ಮತ್ತೆ ಸಂಪೂರ್ಣ ಮಾಹಿತಿ ಪಡೆಯುತ್ತೇನೆ. ಯಾಕೆ ಈ ರೀತಿ ಸುದ್ದಿ ಹರಡಿತು ಎಂಬುದರ ಬಗ್ಗೆ ಪರಿಶೀಲಿಸುತ್ತೇನೆ. ಕೆಲವೊಮ್ಮೆ ತಪ್ಪು ಮಾಹಿತಿ ಹರಡುವ ಸಾಧ್ಯತೆಯಿದೆ. ಆದ್ದರಿಂದ ಸಭೆ ನಡೆಸಿ ಅಧಿಕಾರಿಗಳಿಂದ ವಿವರಣೆ ತೆಗೆದುಕೊಂಡು ಸ್ಪಷ್ಟನೆ ನೀಡುತ್ತೇನೆ ಎಂದು ಯು.ಟಿ.ಖಾದರ್ ಹೇಳಿದರು.

Edited By : Manjunath H D
PublicNext

PublicNext

30/07/2026 10:04 pm

Cinque Terre

15.36 K

Cinque Terre

0

ಸಂಬಂಧಿತ ಸುದ್ದಿ