ಉಡುಪಿ: ರಾಷ್ಟ್ರೀಯ ಹೆದ್ದಾರಿ-66ರ ಕಟಪಾಡಿ ಯೇಣಗುಡ್ಡೆ ತೇಕಲ್ ತೋಟದ ಬಳಿ ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಾಜಕದ (ಡಿವೈಡರ್) ಮೇಲೇರಿದ ಘಟನೆ ಸಂಭವಿಸಿದೆ. ಮಂಗಳೂರು ಕಡೆಯಿಂದ ರೋಗಿಯೊಬ್ಬರನ್ನು ಉಡುಪಿಯತ್ತ ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಕಟಪಾಡಿ ಜಂಕ್ಷನ್ ದಾಟಿದ ಬಳಿಕ ಸಿಗುವ ಡಿವೈಡರ್ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡಿತು. ಬಳಿಕ ಹೆದ್ದಾರಿ ವಿಭಾಜಕದ ಮೇಲೇರಿ ಉಡುಪಿ-ಮಂಗಳೂರು ಹೆದ್ದಾರಿಯನ್ನು ದಾಟಿ ಪಕ್ಕಕ್ಕೆ ಸರಿದು ನಿಂತಿತು. ಈ ವೇಳೆ ಆಂಬುಲೆನ್ಸ್‌ನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ತಕ್ಷಣವೇ ಮತ್ತೊಂದು ಆಂಬುಲೆನ್ಸ್ ಮೂಲಕ ರೋಗಿ ಹಾಗೂ ಇತರರನ್ನು ಉಡುಪಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಪಘಾತದ ಹಿನ್ನೆಲೆಯಲ್ಲಿ ಕೆಲಕಾಲ ಹೆದ್ದಾರಿಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು.
PublicNext
05/08/2026 01:45 pm
LOADING...