ಬ್ರಹ್ಮಾವರ : ಕರಾವಳಿ ಜಿಲ್ಲೆಯಲ್ಲಿ 150 ವರ್ಷದಿಂದಲೂ ದೇವರೀಗೆ ಭಜನೆಯ ಮೂಲಕ ಭಕ್ತಿಯ ಸೇವೆಯನ್ನಾಗಿಸಿ ಇಂದು ದೇವಿ ದೇವಸ್ಥಾನವಾಗಿ ನಿರ್ಮಾಣಗೊಂಡ ಕೊಂಜಾಡಿ ಶ್ರೀದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಭಾನುವಾರ ಸಂಜೆ ಮಂಡಳಿಯ 3 ತಲೆಮಾರಿನ ಸದಸ್ಯರಿಂದ 3 ಗಂಟೆಯ ಭಜನಾ ಗಾನಾಮೃತ ಜರುಗಿತು.
ಧಾರ್ಮಿಕ ಮುಖಂಡ ವಿಜಯಕುಮಾರ್ ಶೆಟ್ಟಿ ಗೋಳಿಯಂಗಡಿ ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸತೀಶ ನಾಯ್ಕ್ ಕಲ್ಮರ್ಗಿ, ಆನಂದ ಶೆಟ್ಟಿ ನಿರ್ಗಡಿಗೆ, ಚಂದ್ರ ಆಚಾರ್ಯ ಗೋಳಿಯಂಗಡಿ, ಸಂತೋಷ ಪೂಜಾರಿ ಆರ್ಡಿ,ಗಣಪತಿ ನಾಯ್ಕ್ ಆರ್ಡಿ,ಕೃಷ್ಣ ಮೂರ್ತಿ ಆಚಾರ್ಯ,ಪ್ರಕಾಶ್ ಪೂಜಾರಿ ಕೃಷ್ಣ ನಾಯ್ಕ್, ಸುದರ್ಶನ ಶೆಟ್ಟಿ. ರುದ್ರಾಯ ಆಚಾರ್ಯ ಉಪಸ್ಥಿತರಿದ್ದರು.
ಭಜನಾ ಮಂಡಳಿಯಲ್ಲಿ 80 ವರ್ಷದ ಹಿರೀಯರು 50 ವರ್ಷದ ನಡು ವಯಸ್ಸಿನವರು 10 ವರ್ಷದ ಬಾಲಕ ಬಾಲಕೀಯರು ಕೂಡಾ ಇಂದಿಗೂ ಇಲ್ಲಿ ಭಜನೆಯಲ್ಲಿ ತೊಡಗಿಸಿಕೊಂಡು ಕಲಿಯುಗದಲ್ಲಿ ಹರಿನಾಮವ ನೆನೆದರೆ ಕುಲಕೋಟಿಗಳು ಉದ್ದರಿಸುವವವು ಎನ್ನುವ ದಾಸವಾಣಿಯನ್ನು ಗ್ರಾಮೀಣಭಾಗದಲ್ಲಿ ಮುನ್ನಡೆಸಿಕೊಂಡುಬಂದು ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಮಾದರಿಯಾಗಿದೆ.
PublicNext
05/08/2026 11:05 pm
LOADING...