ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ: ವಿಶೇಷಚೇತನ ವಿದ್ಯಾರ್ಥಿನಿಯ ಶಿಕ್ಷಣಕ್ಕೆ ಶಾಸಕ ಬಿ.ಎನ್. ರವಿಕುಮಾರ್ ನೆರವು

ಶಿಡ್ಲಘಟ್ಟ: ಶಿಕ್ಷಣದ ಹಾದಿಯಲ್ಲಿ ಆರ್ಥಿಕ ಅಥವಾ ದೈಹಿಕ ಸಮಸ್ಯೆಗಳು ಅಡ್ಡಿಯಾಗಬಾರದು ಎಂಬ ಸಾಮಾಜಿಕ ಕಾಳಜಿಯೊಂದಿಗೆ ಶಿಡ್ಲಘಟ್ಟ ಶಾಸಕ ಬಿ.ಎನ್. ರವಿಕುಮಾರ್ ಅವರು ವಿಶೇಷಚೇತನ ವಿದ್ಯಾರ್ಥಿನಿಯೊಬ್ಬಳ ಉನ್ನತ ಶಿಕ್ಷಣಕ್ಕೆ ಅಗತ್ಯ ನೆರವು ಒದಗಿಸಿದ್ದಾರೆ.

ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಪ್ಪೇನಹಳ್ಳಿ ಗ್ರಾಮದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿ ಕುಮಾರಿ ಯಶಸ್ವಿನಿ ಅವರು, ವಿದ್ಯಾಭ್ಯಾಸಕ್ಕೆ ಲ್ಯಾಪ್‌ಟಾಪ್ ಹಾಗೂ ಸಂಚಾರಕ್ಕೆ ಎಲೆಕ್ಟ್ರಿಕ್ ವೀಲ್‌ಚೇರ್ ಅಗತ್ಯವಿರುವುದಾಗಿ ಶಾಸಕರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ವಿದ್ಯಾರ್ಥಿನಿಯ ಪರಿಸ್ಥಿತಿಯನ್ನು ಅರಿತ ಶಾಸಕ ರವಿಕುಮಾರ್ ಅವರು ಯಾವುದೇ ವಿಳಂಬ ಮಾಡದೇ ಲ್ಯಾಪ್‌ಟಾಪ್ ಮತ್ತು ಎಲೆಕ್ಟ್ರಿಕ್ ವೀಲ್‌ಚೇರ್ ವಿತರಿಸಿ, ಆಕೆಯ ಶಿಕ್ಷಣ ನಿರಂತರವಾಗಿ ಸಾಗಲು ಅಗತ್ಯ ಬೆಂಬಲ ನೀಡಿದರು. ಈ ನೆರವಿನಿಂದ ಯಶಸ್ವಿನಿ ಅವರ ವಿದ್ಯಾಭ್ಯಾಸ ಮತ್ತಷ್ಟು ಸುಗಮವಾಗಲಿದ್ದು, ಭವಿಷ್ಯದ ಗುರಿ ಸಾಧನೆಗೆ ಹೊಸ ಆತ್ಮವಿಶ್ವಾಸ ಮೂಡಿದೆ.

ಶಾಸಕರ ಈ ಮಾನವೀಯ ನಡೆಗೆ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು. ಸಮಾಜದಲ್ಲಿ ಶಿಕ್ಷಣಕ್ಕೆ ಉತ್ತೇಜನ ನೀಡುವ ಇಂತಹ ಕಾರ್ಯಗಳು ಇನ್ನಷ್ಟು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿವೆ ಎಂದು ಅಭಿಪ್ರಾಯಪಟ್ಟರು.

ಚಿಕ್ಕತೇಕಹಳ್ಳಿ ಡಿ. ಶಿವಕುಮಾರ್, ಪಬ್ಲಿಕ್ ನೆಕ್ಸ್ಟ್ ಚಿಕ್ಕಬಳ್ಳಾಪುರ

Edited By : Vinayak Patil
PublicNext

PublicNext

01/08/2026 07:17 pm

Cinque Terre

11.58 K

Cinque Terre

0