ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ರೀ ಮಾರುತೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಯೋಜನೆಯಿಂದ 'ಡಿಡಿ' ವಿತರಣೆ!

ಬಾಗಲಕೋಟೆ: ಜಿಲ್ಲೆಯ ಬೀಳಗಿ ಯೋಜನಾ ಕಚೇರಿ ವ್ಯಾಪ್ತಿಯ ಅಲಗುಂಡಿ ಬಿ.ಕೆ. ಕಾರ್ಯಕ್ಷೇತ್ರದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿ.ಸಿ. ಟ್ರಸ್ಟ್) ವತಿಯಿಂದ ಶ್ರೀ ಮಾರುತೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗಾಗಿ 'ಡಿಮ್ಯಾಂಡ್ ಡ್ರಾಫ್ಟ್' (DD) ವಿತರಣಾ ಕಾರ್ಯಕ್ರಮವು ಸ್ಥಳೀಯ ಸಭಾಭವನದಲ್ಲಿ ಮಂಗಳವಾರ ಜರುಗಿತು.

ಕಾರ್ಯಕ್ರಮದಲ್ಲಿ ಡಿಡಿ ಹಸ್ತಾಂತರಿಸಿ ಮಾತನಾಡಿದ ಜಿಲ್ಲಾ ನಿರ್ದೇಶಕರು, "ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರಕ್ಕೆ ನೀಡಲಾಗುತ್ತಿರುವ ಅನುದಾನವು ದೇವಸ್ಥಾನಗಳ ಅಭಿವೃದ್ಧಿಯೊಂದಿಗೆ ಜನರಲ್ಲಿ ಭಕ್ತಿಭಾವ, ಸಾಮಾಜಿಕ ಸಾಮರಸ್ಯ ಮತ್ತು ಸೇವಾ ಮನೋಭಾವ ಬೆಳೆಸಲು ಪ್ರೇರಣೆಯಾಗಿದೆ. ಒಂದು ಹಳ್ಳಿಯ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದಿಂದ ಅನುದಾನ ಸಿಗುವುದು ಜನರ ಸದಿಚ್ಛೆಯಷ್ಟೇ ಅಲ್ಲದೆ ದೈವಾನುಗ್ರಹವೂ ಹೌದು" ಎಂದು ತಿಳಿಸಿದರು. ಇದೇ ವೇಳೆ ಅವರು ಯೋಜನೆಯ ವಿವಿಧ ಜನಪರ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಹನುಮಂತ ಕರಿಸಿಪ್ಪನವರ, ಉಪಾಧ್ಯಕ್ಷ ವೀರಣ್ಣ ನ್ಯಾಮಗೌಡರ, ಯೋಜನಾಧಿಕಾರಿ ಸುಬ್ರಾಯ ಗೌಡ ಸೇರಿದಂತೆ ಧರ್ಮಸ್ಥಳ ಯೋಜನೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

04/08/2026 04:57 pm

Cinque Terre

360

Cinque Terre

0