ಬಾಗಲಕೋಟೆ: ನೂತನ ಸಚಿವ ಸಂಪುಟದಲ್ಲಿ ಮಾಜಿ ಸಚಿವ ಆರ್. ಬಿ. ತಿಮ್ಮಾಪುರ ಅವರಿಗೆ ಸ್ಥಾನ ತಪ್ಪಿದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ನಗರದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ನಗರದ ರನ್ನ ವೃತ್ತದಲ್ಲಿ ಜಮಾವಣೆಗೊಂಡ ಪಕ್ಷದ ಕಾರ್ಯಕರ್ತರು, ಹಿರಿಯ ರಾಜಕಾರಣಿ ಹಾಗೂ ದಲಿತ ಸಮುದಾಯದ ಪ್ರಬಲ ನಾಯಕನಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.
ಸಂಗಪ್ಪ ಇಮ್ಮನ್ನವರ, ಮುದಕಣ್ಣ ಅಂಬಿಗೇರ, ಶಿವಾನಂದ ಮ್ಯಾಗೇರಿ, ಮಂಜು ಉಪ್ಪಾರ ಸೇರಿದಂತೆ ಇತರರು ಇದ್ದರು. ರಾಜ್ಯದಲ್ಲಿ ಸದ್ಯ ಸಚಿವ ಸ್ಥಾನ ವಂಚಿತರ ಬೆಂಬಲಿಗರ ಆಕ್ರೋಶ ಹಾಗೂ ಪ್ರತಿಭಟನೆ ತಣ್ಣಗಾಗುವ ಲಕ್ಷಣಗಳು ಕಾಣಿಸುತ್ತಿಲ್ಲ.
PublicNext
05/08/2026 01:33 pm
LOADING...