ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೇಕಾರರಿಗೆ ರೈತ ಸಂಘದ ಬೆಂಬಲ- ಮುಖಂಡ ಚೂನಪ್ಪ ಪೂಜಾರಿ

ರಬಕವಿ-ಬನಹಟ್ಟಿ: ನೇಕಾರರ ಬದುಕಿನ‌ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದ್ದು, ರಾಜ್ಯ ಸರ್ಕಾರ ನೇಕಾರ ಕಾಳಜಿವಹಿಸಬೇಕೆಂದು ರಾಜ್ಯ ರೈತ ಸಂಘದ ಹಿರಿಯ ಮುಖಂಡ ಚೂನಪ್ಪ ಪೂಜಾರಿ ಹೇಳಿದರು.

ಅವರು ರಬಕವಿಯ ನೇಕಾರ ಮನೆಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಮಾತನಾಡುತ್ತಾ, ಶಿವಲಿಂಗ ಅವರು ಕಳೆದ ಎರಡು ದಶಕಗಳಿಂದ ಹೋರಾಟ ಮಾಡುತ್ತಾ ಬಂದಿದ್ದು, ನೇಕಾರರಿಗೆ ವಿಮೆ ಸೇರಿ ಹಲವು ಯೋಜನೆಗಳನ್ನು ಜಾರಿಗೊಳಿಸಬೇಕು. ನೇಕಾರರೊಂದಿಗೆ ರೈತ ಸಂಘ ಸದಾ ಬೆಂಬಲವಾಗಿದೆ ಎಂದರು.

ರಾಜ್ಯ ನೇಕಾರ ಸೇವಾ ಸಂಘ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ, ಚೇತನ ಮನ್ಮಿ, ಶ್ರೀಶೈಲ ಅಂಗಡಿ, ರಾಜೇಂದ್ರ ಮಿರ್ಜಿ, ಮಲ್ಲಪ್ಪ ಅಂಗಡಿ, ಸಂಗಪ್ಪ ಉದಗಟ್ಟಿ, ಗಂಗಪ್ಪ ಒಂಟಗೋಡಿ, ರಾಮಣ್ಣ ಕುಂದಗೋಳ, ಬಸವರಾಜ ಜಮಖಂಡಿ ಸೇರಿದಂತೆ ಅನೇಕರಿದ್ದರು.

Edited By : PublicNext Desk
Kshetra Samachara

Kshetra Samachara

03/08/2026 07:03 pm

Cinque Terre

600

Cinque Terre

0

ಸಂಬಂಧಿತ ಸುದ್ದಿ