ರಬಕವಿ-ಬನಹಟ್ಟಿ:
ಬನಹಟ್ಟಿ ನಗರದಲ್ಲಿ ಆರ್.ಕೆ ಮ್ಯೂಸಿಕ್ ಅಕಾಡೆಮಿ ಅನ್ನು ಉದ್ಘಾಟನಾ ಕಾರ್ಯಕ್ರಮವನ್ನು ಖ್ಯಾತ ಸಾಹಿತಿ, ಸಂಗೀತ ವಿಮರ್ಶಕ ಸಿದ್ಧರಾಜ ಪೂಜಾರಿ ಉದ್ಘಾಟಿಸಿ ಮಾತನಾಡಿ.
ಸಂಗೀತವು ಮನುಷ್ಯನ ವ್ಯಕ್ತಿತ್ವವನ್ನು ವಿಕಾಸಕಾರಿಯಾಗಿ ಏಕಾಗ್ರತೆ ಮೂಲಕ ದೈಹಿಕ ಅರೋಗ್ಯ ಉತ್ತಮಗೊಳ್ಳುವಂತೆ ಸಹಕರಿಸುತ್ತದೆ. ಈ ಸಂಗೀತ ಶಾಲೆ ಎತ್ತರಕ್ಕೆ ಬೆಳೆಯಲಿ. ಸಂಗೀತದ ಜ್ಞಾನ ಎಲ್ಲಾ ಮಕ್ಕಳಿಗೆ ಸಿಗಲಿ ಎಂದು ಹಾರೈಸಿದರು.
ಸೋಮವಾರ ಪೇಟೆ ದೈವ ಮಂಡಳಿಯ ಅಧ್ಯಕ್ಷ ಮಲ್ಲಿಕಾರ್ಜುನ ತುಂಗಳ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಂಗೀತ ಎನ್ನುವುದು ಕೇವಲ ಕರೋಕೆ ಹಾಗೂ ಅನೇಕ ರೀತಿಯ ಜಾನಪದ ಹಾಡುಗಳಿಗೆ ಸಿಮಿತವಾಗಿರುವುದು ವಿಷಾದನೀಯ ಸಂಗತಿಯಾಗಿದೆ.
ಇಂತಹ ಸಂದರ್ಭದಲ್ಲಿ ನಿಜವಾದ ಸಂಗೀತ ಕ್ಕೆ ಬೆಲೆ ಕಳೆದುಕೊಂಡ ಹಾಗೆ ಆಗಿದೆ. ಶಾಸ್ತ್ರೀಯ ಹಾಗೂ ಸುಗಮ ಸಂಗೀತಗಳನ್ನು ಗೌರವಪೂರಕವಾಗಿ ಕಲಿತಾಗ ನಾಡಿನ ಖ್ಯಾತಿವೆತ್ತ ಗಾಯಕರ ಸಾಲಿಗೆ ಅಕಾಡೆಮಿ ಸಾಕ್ಷಿಯಾಗಲಿ ಎಂದರು.
ಕಾರ್ಯಕ್ರಮ ದಲ್ಲಿ RK ಫೌಂಡೇಶನ್ ನ ಅಧ್ಯಕ್ಷ ಕುಲಕರ್ಣಿ, ಸದಸ್ಯ ಶ್ಯಾಮ್ ತಳವಾರ, ಪ್ರಕಾಶ ಕೋರ್ಪಡೆ ಹಾಗೂ ಮುಖ್ಯ ಗುರುಮಾತೆಯರು ಶಾಲಾ ಮಕ್ಕಳು ನಗರದ ಸಂಗೀತ ಪ್ರಿಯರು ಭಾಗವಹಿಸಿದ್ದರು.
ಸಂಗೀತ ಶಿಕ್ಷಕ ಬಾವುರಾಜ ತುಬಚೆ ಹಾಗೂ ಮಕ್ಕಳಿಂದ ಗಾಯನ ಪ್ರಸ್ತುತಿ ಕಾರ್ಯಕ್ರಮ ಜರುಗಿತು.
Kshetra Samachara
02/08/2026 01:54 pm
LOADING...