ರಬಕವಿ-ಬನಹಟ್ಟಿ: ತಾಲೂಕಿನ ಹಿಪ್ಪರಗಿ ಗ್ರಾಮದ ಹೊರವಲಯದಲ್ಲಿರುವ ವೈನ್ ಶಾಪ್ ಮುಂಭಾಗದಲ್ಲಿ ನಿಲ್ಲಿಸಲಾದ XUV300 ಕಾರು ಶನಿವಾರ ತಡರಾತ್ರಿ ಸ್ಫೋಟಗೊಂಡು ಛಿದ್ರಛಿದ್ರವಾದ ಘಟನೆ ನಡೆದಿದೆ.
ಜಯಶ್ರೀ ಹಣಮಂತ ಅಥಣಿ ಅವರಿಗೆ ಸೇರಿದ ಕಾರು ಇದಾಗಿದ್ದು, ಹಣಮಂತ ಅವರು ಅದೇ ಕಾರು ಮೂಲಕ ತೆರಳಬೇಕಿದ್ದು, ಸುದೈವವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಸ್ಥಳಕ್ಕೆ ಬೆಳಗಾವಿ ಬಾಂಬ್ ನಿಷ್ಕ್ರಿಯ ದಳ, ಡಾಗ್ ಸ್ಕ್ಯಾಡ್ ಸೇರಿದಂತೆ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದ್ದಾರೆ.
ಸ್ಫೋಟದ ಕಾರಣ ಕುರಿತಂತೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
PublicNext
26/07/2026 08:37 pm
LOADING...