ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಬೆನಕಟ್ಟಿ ಗ್ರಾಮದಲ್ಲಿ ಆಷಾಢ ಪರ್ವದ ಅಂಗವಾಗಿ ರೈತಾಪಿ ಜನರು
ಕಿಚಡಿ ಮೆರವಣಿಗೆ ನಡೆಸಿದ್ದಾರೆ. ಕಂಚಿ ವೆಂಕಟೇಶ್ವರ ದೇವರಿಗೆ ಭಕ್ತಿಭಾವದಿಂದ ಕಿಚಡಿ ತಯಾರಿಸಿ ನೈವೇದ್ಯ ಸಮರ್ಪಿಸಿದ್ದಾರೆ.
ಕಿಚಡಿ ಪಾತ್ರೆಗಳನ್ನು ಹೊತ್ತು ಭಕ್ತರು ಸಾಂಪ್ರದಾಯಿಕ ಮೆರವಣಿಗೆಯೊಂದಿಗೆ ದೇವಾಲಯದತ್ತ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಗ್ರಾಮದಲ್ಲಿ ಧಾರ್ಮಿಕ ಸಂಭ್ರಮ, ಭಕ್ತಿ ಮತ್ತು ಸಂಪ್ರದಾಯದ ಸೊಬಗು ಮೇಳೈಸಿದ ಈ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
PublicNext
01/08/2026 12:06 pm
LOADING...