ಬಾಗಲಕೋಟೆ: ರಬಕವಿ-ಬನಹಟ್ಟಿ ನಗರದ ಈಶ್ವರಲಿಂಗ ಮೈದಾನದಲ್ಲಿ ರಬಕವಿ-ಬನಹಟ್ಟಿ ಹೋಟೆಲ್ ಮಾಲಿಕರ ಸಂಘದ ಆಶ್ರಯದಲ್ಲಿ ಉಡುಪಿಯ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯಿಂದ ಪ್ರದರ್ಶಿಸಲಾದ 'ಮೋಹಿನಿ ಭಸ್ಮಾಸುರ' ಹಾಗೂ 'ಶಬರಿಮಲೈ ಸ್ವಾಮಿ ಅಯ್ಯಪ್ಪ' ಯಕ್ಷಗಾನ ನೃತ್ಯರೂಪಕಗಳು ಪ್ರೇಕ್ಷಕರ ಮನಗೆದ್ದವು.
ಶುಕ್ರವಾರ ಸಂಜೆ ನೇಕಾರ ನಗರಿಯಲ್ಲಿ ನಡೆದ ಯಕ್ಷಗಾನದ ವೈಭವೋಪೇತ ವೇಷಭೂಷಣ, ಭಾವಪೂರ್ಣ ಅಭಿನಯ ಹಾಗೂ ವಿಶಿಷ್ಟ ಕಲಾಪ್ರದರ್ಶನವು ನೇಕಾರರಲ್ಲಿ ಹೊಸ ಸಾಂಸ್ಕೃತಿಕ ಉತ್ಸಾಹವನ್ನು ಮೂಡಿಸಿತು.
ಈ ಕಾರ್ಯಕ್ರಮವು ಸತತ ನಾಲ್ಕನೇ ವರ್ಷವೂ ಯಶಸ್ವಿಯಾಗಿ ಆಯೋಜನೆಯಾಗಿದ್ದು, ಉಡುಪಿ ಭಾಗದ ಹೋಟೆಲ್ ಮಾಲಿಕರು ದಿನನಿತ್ಯ ಸವಿರುಚಿಯ ಆಹಾರವನ್ನು ಬಡಿಸುವುದರ ಜೊತೆಗೆ, ಇದೀಗ ನೇಕಾರ ನಗರಿಯ ಜನತೆಗೆ ಯಕ್ಷಗಾನದ ರಸದೌತಣವನ್ನು ಉಣಬಡಿಸುವ ಮೂಲಕ ವಿಶೇಷ ಮೆಚ್ಚುಗೆಗೆ ಪಾತ್ರರಾದರು.
ಕಾರ್ಯಕ್ರಮದಲ್ಲಿ ಮಹಿಳೆಯರು, ಮಕ್ಕಳು, ಹಿರಿಯರು ಸೇರಿದಂತೆ ಅಪಾರ ಸಂಖ್ಯೆಯ ಕಲಾಪ್ರೇಮಿಗಳು ಭಾಗವಹಿಸಿ ಯಕ್ಷಗಾನವನ್ನು ಆಸ್ವಾದಿಸಿದರು.
PublicNext
25/07/2026 07:41 am
LOADING...