ಸುರತ್ಕಲ್: ಶಾಲೆಯಲ್ಲಿ ವಾಲಿಬಾಲ್ ಆಟವಾಡುತ್ತಿದ್ದ ವೇಳೆ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟ ಘಟನೆ ಬುಧವಾರ ಸುರತ್ಕಲ್ ಸಮೀಪದ ಸೂರಿಂಜೆಯ ಕೋಟೆ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ನಿಖಿತ್ ಎಂ. ಅಮೀನ್ ಎಂದು ಗುರುತಿಸಲಾಗಿದೆ.
ಸೂರಿಂಜೆಯ ಕೋಟೆ ಸರ್ಕಾರಿ ಶಾಲೆಯಲ್ಲಿ 10 ನೇ ತರಗತಿ ಕಲಿಯುತ್ತಿದ್ದ ನಿಖಿತ್, ಬುಧವಾರ ಸಂಜೆ ಶಾಲೆಯ ಮುಂಭಾಗದ ಮೈದಾನದಲ್ಲಿ ವಾಲಿಬಾಲ್ ಆಟವಾಡುವ ಸಂದರ್ಭದಲ್ಲಿ ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಸುರತ್ಕಲ್‌ನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಖಿತ್ ಮೃತಪಟ್ಟಿದ್ದಾರೆ.
ಸೂರಿಂಜೆ ಬೊಳ್ಳಾರು ನಿವಾಸಿ ಮಾಧವ ಅಮೀನ್ ಮತ್ತು ಶೀಲಾ ದಂಪತಿಯ ಮೂವರು ಮಕ್ಕಳಲ್ಲಿ ನಿಖಿತ್ ಕಿರಿಯವನಾಗಿದ್ದಾನೆ. ತಂದೆ ಮಾಧವ ಅಮೀನ್ ಆಟೋ ಚಾಲಕರಾಗಿದ್ದು, ತಾಯಿ ಶೀಲಾ ಗೃಹಿಣಿಯಾಗಿದ್ದಾರೆ.
PublicNext
06/08/2026 10:13 am
LOADING...