ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸಂತ ಥೆರೇಸಾ ಶಾಲೆಯಲ್ಲಿದೆ 'ಐರಿಸ್' ಎಐ ಟೀಚರ್!

ಮಂಗಳೂರು: ಸದ್ಯ ನಾವು ಎಐ ಯುಗದಲ್ಲಿದ್ದೇವೆ. ಎಲ್ಲಾ ಕ್ಷೇತ್ರದಲ್ಲೂ ಎಐ ತನ್ನ ಕಬಂಧ ಬಾಹುವನ್ನು ವಿಸ್ತರಿಸುತ್ತಿದೆ. ಇದೇ ಎಐ ತಂತ್ರಜ್ಞಾನದ ಟೀಚರ್ ಒಂದು ಮಂಗಳೂರಿನ ಬೆಂದೂರುವೆಲ್‌ನ ಸಂತ ಥೆರೇಸಾ ಶಾಲೆಯಲ್ಲಿ ಗಮನ ಸೆಳೆಯುತ್ತಿದೆ.

ಸಾಂಪ್ರದಾಯಿಕ ಶಿಕ್ಷಣಕ್ಕೊಂದು ತಾಂತ್ರಿಕ ಟಚ್ ನೀಡಲು ಥೆರೇಸಾ ಶಾಲೆಯು, ದ.ಕ.ಜಿಲ್ಲೆಯಲ್ಲಿ ಪ್ರಥಮ ಬಾರಿಗೆ 'ಐರಿಸ್' ಹೆಸರಿನ ಕೃತಕ ಬುದ್ಧಿಮತ್ತೆಯ ರೋಬೋಟ್ ಶಿಕ್ಷಕಿಯನ್ನು ಪರಿಚಯಿಸಿ ಇತಿಹಾಸ ಬರೆದಿದೆ.‌‌ ಈ ರೋಬೊಟ್ ಶಿಕ್ಷಕಿಯನ್ನು ಇತ್ತೀಚೆಗೆ ಈ ಶಾಲೆಗೆ ತರಲಾಗಿದೆ. ಇದರಲ್ಲಿ ಶಾಲೆಯ ಪ್ರಾಥಮಿಕ ಶಾಲೆಯಿಂದ ಪಿಯುಸಿವರೆಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪ್ರೋಗ್ರಾಮಿಂಗ್ ಮಾಡಲಾಗಿದೆ. ಈ ರೊಬೊಟ್ ಶಿಕ್ಷಕಿಯನ್ನು ಶಾಲೆಯ ಎಐ ಲ್ಯಾಬ್ ನಲ್ಲಿ ಇಡಲಾಗಿದ್ದು, ಇಲ್ಲಿ ಬರುವ ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ವಿಷಯಗಳಿಗೆ ಸಂಬಂಧಿಸಿದಂತೆ ತಮ್ಮ ಸಂಶಯಗಳನ್ನು ಕೇಳಿ ಉತ್ತರಗಳನ್ನು ಪಡೆಯಬಹುದಾಗಿದೆ.

'ಐರಿಸ್' ತನ್ನ ಮುಂದೆ ಬಂದವರನ್ನು ಗುರುತಿಸಿ ಆತ್ಮೀಯವಾಗಿ 'ಹಲೋ' ಎಂದು ಕಣ್ಣು ಮಿಟುಕಿಸುತ್ತಾ ಸ್ವಾಗತಿಸುತ್ತದೆ. ಜೊತೆಗೆ ಕೈ ಕುಲುಕಿ

ಈ ಎಐ ರೋಬೊಟ್‌ಗೆ ಸುಧಾರಿತ 'ಚಾಟ್ ಜಿಪಿಟಿ' ತಂತ್ರಜ್ಞಾನ ಹಾಗೂ ಪ್ರೊಸೆಸರ್‌ಗಳನ್ನು ಜೋಡಿಸಲಾಗಿದೆ‌. ಸದಾ ಇಂಟರ್ನೆಟ್ ಜಾಲಕ್ಕೆ ಸಂಪರ್ಕಗೊಂಡಿರುತ್ತದೆ. ಇದರಿಂದಾಗಿ ಪ್ರಚಲಿತ ವಿದ್ಯಮಾನ, ಬಾಹ್ಯಾಕಾಶ ವಿಜ್ಞಾನ, ಗಣಿತದ ಸೂತ್ರಗಳಿಂದ ಹಿಡಿದು ಸಾಹಿತ್ಯದ ವಿಚಾರಗಳವರೆಗೆ ಯಾವುದೇ ಪ್ರಶ್ನೆ ಕೇಳಿದರೂ, ಕೆಲವೇ ಸೆಕೆಂಡುಗಳಲ್ಲಿ ನಿಖರವಾಗಿ ಉತ್ತರ ನೀಡುತ್ತದೆ. ಈ ರೋಬೊಟ್ ಕನ್ನಡ, ತಮಿಳು, ಹಿಂದಿ, ಇಂಗ್ಲಿಷ್‌ನಲ್ಲಿ ಕೇಳುವ ಪ್ರಶ್ನೆಗಳನ್ನು ಗ್ರಹಿಸಿ, ಅದೇ ಭಾಷೆಯಲ್ಲಿ ಸ್ಪಷ್ಟವಾಗಿ ಉತ್ತರಿಸುತ್ತದೆ.

ಎಐ ತಂತ್ರಜ್ಞಾನವನ್ನು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಹಾಗೂ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಹೇಗೆ ಜವಾಬ್ದಾರಿಯುತವಾಗಿ ಬಳಸಬಹುದು ಎಂಬುದಕ್ಕೆ ಮಂಗಳೂರಿನ ಸಂತ ಥೆರೇಸಾ ಶಾಲೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ.

Edited By :
PublicNext

PublicNext

06/08/2026 09:40 am

Cinque Terre

16.14 K

Cinque Terre

0