ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೆಯಂಗಡಿ: ಬಸ್ ನಿಲ್ದಾಣದ ದುರಾವಸ್ಥೆ - ನಿದ್ರಾವಸ್ಥೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ!!

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಜಂಕ್ಷನ್ ಬಳಿಯ ಬಸ್ ನಿಲ್ದಾಣ ಅವ್ಯವಸ್ಥೆಗಳ ಆಗರವಾಗಿದ್ದು ಸಂಬಂಧಪಟ್ಟ ಹೆದ್ದಾರಿ ಇಲಾಖೆ ಮೌನವಹಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳೂರಿನಿಂದ ಕಿನ್ನಿಗೋಳಿ ಕಡೆಗೆ ಹೋಗುವ ಬಸ್ಸುಗಳು ನಿಲ್ಲುವ ಹಳೆಯಂಗಡಿ ಜಂಕ್ಷನ್ ಬಳಿಯ ಬಸ್ ತಂಗುದಾಣ ಭಿಕ್ಷುಕರ ಪುಂಡಪೋಕರಿಗಳ ತಾಣವಾಗಿದೆ.

ಬಸ್ ತಂಗುದಾಣದ ಎದುರು ಭಾಗದಲ್ಲಿ ತ್ಯಾಜ್ಯ ನೀರು ಹರಿಯುತ್ತಿದ್ದರೆ ಹಿಂಭಾಗದಲ್ಲಿ ಕಸದ ಕೊಂಪೆ ಹಾಗೂ ಬಯಲು ಶೌಚಾಲಯದ ತಾಣವಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸುಸಜ್ಜಿತ ಬಸ್ ನಿಲ್ದಾಣ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಬಸ್ ತಂಗುದಾಣದಲ್ಲಿ ಪ್ರಯಾಣಿಕರಿಗೆ ಅದರಲ್ಲೂ ಮಹಿಳೆಯರಿಗೆ ಕುಳಿತುಕೊಳ್ಳಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಷ್ಟ್ರೀಯ ಹೆದ್ದಾರಿ ಹಳೆಯಂಗಡಿಯ ಮೂರು ಬಸ್ ನಿಲ್ದಾಣ ಕೂಡ ಅವ್ಯವಸ್ಥೆಗಳ ಕೇಂದ್ರ ಬಿಂದುವಾಗಿದೆ. ಒಳಚರಂಡಿ ಅವ್ಯವಸ್ಥೆಗಳಿಂದ ಸೊರಗಿ ಹೋಗಿರುವ ಬಸ್ ನಿಲ್ದಾಣಗಳ ಸುತ್ತ ಬಹು ಮಹಡಿ ಕಟ್ಟಡಗಳ ತ್ಯಾಜ್ಯ ನೀರು ಹರಿಯುತ್ತಿದೆ. ಬಸ್ ತಂಗುದಾಣದ ಸುತ್ತ ಹುಲುಸಾಗಿ ಬೆಳೆದಿರುವ ಪೊದೆಗಳು ಪ್ರಯಾಣಿಕರಿಗೆ ಭೀತಿ ಹುಟ್ಟಿಸುತ್ತಿದೆ. ಈ ಬಗ್ಗೆ ಅನೇಕ ಬಾರಿ ಹೆದ್ದಾರಿ ಇಲಾಖೆಗೆ ತಿಳಿಸಿದ್ದರೂ ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಧರ್ಮಾನಂದ ಶೆಟ್ಟಿಗಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By : Vinayak Patil
PublicNext

PublicNext

06/08/2026 07:38 pm

Cinque Terre

5.37 K

Cinque Terre

0