ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ-ಪಡುಕೆರೆಯಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ; ಶತಮಾನಗಳ ಸಂಪ್ರದಾಯಕ್ಕೆ ಜೀವ ತುಂಬಿದ ಮೀನುಗಾರರು

ಉಡುಪಿ ಜಿಲ್ಲೆಯ ಮಲ್ಪೆ ಹಾಗೂ ಪಡುಕೆರೆ ಕರಾವಳಿ ಭಾಗದಲ್ಲಿ ಈ ಬಾರಿ ನಿರೀಕ್ಷಿತ ಮಳೆಯಾಗದ ಹಿನ್ನೆಲೆಯಲ್ಲಿ ಮೀನುಗಳ ಲಭ್ಯತೆ ತೀರಾ ವಿರಳವಾಗಿದೆ. ಮಳೆಗಾಲದಲ್ಲಿ ಕಡಲಿಗೆ ತೆರಳುವ ಸಾಂಪ್ರದಾಯಿಕ ಮೀನುಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಮೀನುಗಾರರ ಪ್ರಮುಖ ಸಮಸ್ಯೆಗಳು:

ಮೀನಿಗಿಂತ ಕಸವೇ ಹೆಚ್ಚು:

ಬಲೆ ಬೀಸಿದಾಗ ಮೀನಿಗಿಂತ ಹೆಚ್ಚಾಗಿ ಪ್ಲಾಸ್ಟಿಕ್ ಕಸ, ಖಾಲಿ ಬಾಟಲಿಗಳು ಹಾಗೂ ತ್ಯಾಜ್ಯವೇ ಬಲೆಗೆ ಬೀಳುತ್ತಿದ್ದು, ಮೀನುಗಾರರು ತೀವ್ರ ಕಂಗಾಲಾಗಿದ್ದಾರೆ.

ಪ್ರತಿ ಸಾಂಪ್ರದಾಯಿಕ ಮೀನುಗಾರಿಕಾ ತಂಡದಲ್ಲಿ ಅಂದಾಜು 70 ರಿಂದ 80 ಜನರಿದ್ದು, ದಿನಪೂರ್ತಿ ಶ್ರಮಿಸಿದರೂ ಸಿಗುವ ಮೀನಿನ ಪ್ರಮಾಣ ತೀರಾ ಕಡಿಮೆಯಿದೆ. ಬಂದ ಆದಾಯವನ್ನು ಎಲ್ಲರಿಗೂ ಹಂಚಿದರೆ ಒಬ್ಬರಿಗೆ ಸಿಗುವ ಸಂಭಾವನೆ ಜೀವನ ನಿರ್ವಹಣೆಗೂ ಸಾಲದಂತಾಗಿದೆ.ಯಾವುದೇ ಬೋಟ್ ಅಥವಾ ಇಂಜಿನ್‌ಗಳನ್ನು ಬಳಸದೆ, ಕೇವಲ ಸಾಂಪ್ರದಾಯಿಕ ಕೌಶಲ ಹಾಗೂ ದೈಹಿಕ ಶ್ರಮವನ್ನೇ ನೆಚ್ಚಿಕೊಂಡು ಈ ಮೀನುಗಾರಿಕೆಯನ್ನು ನಡೆಸಲಾಗುತ್ತದೆ.

ಕಡಲತೀರಕ್ಕೆ ಆಗಮಿಸುವ ಪ್ರವಾಸಿಗರು ಪ್ಲಾಸ್ಟಿಕ್ ಹಾಗೂ ಖಾಲಿ ಬಾಟಲಿ ಸೇರಿದಂತೆ ಯಾವುದೇ ತ್ಯಾಜ್ಯವನ್ನು ಸಮುದ್ರಕ್ಕೆ ಎಸೆಯಬಾರದು. ಕಸವನ್ನು ನಿಗದಿತ ಡಸ್ಟ್‌ಬಿನ್‌ಗಳಲ್ಲೇ ಹಾಕಿ, ಸಮುದ್ರದ ನೈರ್ಮಲ್ಯ ಹಾಗೂ ಮೀನುಗಾರರ ಜೀವನೋಪಾಯವನ್ನು ರಕ್ಷಿಸಲು ಸಹಕರಿಸಬೇಕು ಎಂದು ಮೀನುಗಾರರು ವಿನಂತಿಸಿದ್ದಾರೆ.

Edited By :
PublicNext

PublicNext

06/08/2026 05:15 pm

Cinque Terre

7.49 K

Cinque Terre

0