ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎನ್.ಆರ್.ಪುರ: ಭದ್ರಾ ನದಿಯ ರೌದ್ರಾವತಾರ: ಡ್ರೋನ್‌ನಲ್ಲಿ ಸೆರೆಯಾಯ್ತು ರಮಣೀಯ ದೃಶ್ಯ!

ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮಳೆ ರೌದ್ರಾವತಾರ ಮುಂದುವರಿದಿದ್ದು, ಜಿಲ್ಲೆಯ ಪ್ರಮುಖ ಜೀವನದಿಗಳು ತುಂಬಿ ತುಳುಕುತ್ತಿವೆ. ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಪಟ್ಟಣದಲ್ಲಿ ಹರಿಯುವ ಭದ್ರಾ ನದಿ ರಭಸದಿಂದ ಮೈದುಂಬಿ ಧುಮುಕುತ್ತಿದೆ.

ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಭದ್ರಾ ನದಿಯ ನೀರಿನ ಮಟ್ಟ ಅಪಾಯಕಾರಿ ಹಂತಕ್ಕೆ ತಲುಪಿದೆ. ನದಿಯ ಕೆಸರು ಮಿಶ್ರಿತ ನೀರು ಆರ್ಭಟಿಸುತ್ತಾ ಸಾಗುತ್ತಿದ್ದು, ನದಿಯ ಭೋರ್ಗರೆತ ಹಾಗೂ ರೌದ್ರಾವತಾರದ ಸೊಬಗು ಡ್ರೋನ್ ಕ್ಯಾಮೆರಾದಲ್ಲಿ ಅದ್ಭುತವಾಗಿ ಸೆರೆಯಾಗಿದೆ.

ನದಿಯಲ್ಲಿ ಹರಿವು ತೀವ್ರಗೊಂಡ ಪರಿಣಾಮ ಇಕ್ಕೆಲಗಳಲ್ಲಿರುವ ಅಡಿಕೆ ತೋಟಗಳು ಹಾಗೂ ತಗ್ಗಿನ ಪ್ರದೇಶಗಳಿಗೆ ಪ್ರವಾಹದ ನೀರು ನುಗ್ಗಿದೆ. ಮಲೆನಾಡಿನ ಹಸಿರು ಪ್ರಕೃತಿಯ ಮಡಿಲಿನಲ್ಲಿ ನದಿಯ ಈ ಭೀಕರತೆ ಮತ್ತು ನೈಸರ್ಗಿಕ ಸೌಂದರ್ಯದ ಅಪರೂಪದ ದೃಶ್ಯಗಳು ನೋಡುಗರನ್ನು ಒಂದೆಡೆ ಮಂತ್ರಮುಗ್ಧಗೊಳಿಸಿದರೆ, ಇನ್ನೊಂದೆಡೆ ಆತಂಕ ಮೂಡಿಸುತ್ತಿವೆ.

Edited By :
PublicNext

PublicNext

06/08/2026 04:00 pm

Cinque Terre

9.5 K

Cinque Terre

0

ಸಂಬಂಧಿತ ಸುದ್ದಿ