ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು : ಮತದಾರರ ಪಟ್ಟಿ ಪರಿಷ್ಕರಣೆ ಅಂತಿಮ ಹಂತಕ್ಕೆ; 97 ಸಾವಿರಕ್ಕೂ ಹೆಚ್ಚು ‘ಅಲಭ್ಯ/ಸ್ಥಳಾಂತರ’ ಮತದಾರರ ಗುರುತು

ಚಿಕ್ಕಮಗಳೂರು: ಜಿಲ್ಲಾಡಳಿತ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯವು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ–2026 ಸಂಬಂಧ ಪ್ರಮುಖ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು, ತರೀಕೆರೆ ಮತ್ತು ಕಡೂರು ವಿಧಾನಸಭಾ ಕ್ಷೇತ್ರಗಳ ASDDO (ಗೈರುಹಾಜರಿ, ಸ್ಥಳಾಂತರ, ಮರಣ, ನಕಲಿ ಮತ್ತು ಇತರೆ) ಸಂಭಾವ್ಯ ಪಟ್ಟಿಯನ್ನು ಆಗಸ್ಟ್ 5, 2026ರಂದು ಪ್ರಕಟಿಸಲಾಗಿದೆ. ಈ ಪಟ್ಟಿಯನ್ನು chikkamagaluru.nic.in ಹಾಗೂ ceo.karnataka.gov.in ವೆಬ್‌ಸೈಟ್‌ಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯಗೊಳಿಸಲಾಗಿದೆ.

ಬಿಎಲ್‌ಒಗಳು ಪಟ್ಟಿಯನ್ನು ಬಿಎಲ್‌ಎಗಳಿಗೆ ತಲುಪಿಸಿದ್ದು, ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಜಿಲ್ಲಾ ಅಧ್ಯಕ್ಷರ ಕಚೇರಿಗಳಿಗೂ ಮಾಹಿತಿ ನೀಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ರಾಜಕೀಯ ಪಕ್ಷಗಳೊಂದಿಗೆ ಸಭೆ ನಡೆಸಿ ವಿವರವಾದ ಮಾಹಿತಿ ಹಂಚಿಕೊಳ್ಳಲಾಗಿದೆ.

ಮತಗಟ್ಟೆಗಳ ಮರುವಿಂಗಡಣೆ (Rationalization) ಪ್ರಕ್ರಿಯೆಯಲ್ಲಿ 1,200ಕ್ಕೂ ಹೆಚ್ಚು ಮತದಾರರಿರುವ ಮತಗಟ್ಟೆಗಳನ್ನು ಪರಿಶೀಲಿಸಿ 22 ಹೊಸ ಮತಗಟ್ಟೆಗಳು ಹಾಗೂ 2 ಕಿ.ಮೀ ಗಿಂತ ಹೆಚ್ಚು ದೂರವಿರುವ 3 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಒಟ್ಟು 25 ಹೊಸ ಮತಗಟ್ಟೆಗಳ ರಚನೆಗೆ ಮುಖ್ಯ ಚುನಾವಣಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಇನ್ನೂ ಇಎಫ್ (Enumeration Form) ಫಾರಂಗಳನ್ನು ಸಲ್ಲಿಸದ ಮತದಾರರಿಗೆ ಆಗಸ್ಟ್ 8, 2026ರವರೆಗೆ ಸಂಬಂಧಪಟ್ಟ ಬಿಎಲ್‌ಒಗಳಿಗೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ಜಿಲ್ಲೆಯಲ್ಲಿ ವಿತರಿಸಲಾದ 9,60,231 ಇಎಫ್ ಫಾರಂಗಳಲ್ಲಿ 8,62,667 ಫಾರಂಗಳು (ಶೇ. 89.84) ಡಿಜಿಟೈಸೇಶನ್ ಆಗಿವೆ. ಒಟ್ಟು 97,207 (ಶೇ. 10.12) ASDDO ಪ್ರಕರಣಗಳು ದಾಖಲಾಗಿವೆ.

ಅದರಲ್ಲೂ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಧಿಕ 34,675 ASDDO ಪ್ರಕರಣಗಳು ದಾಖಲಾಗಿದ್ದು, ಶೃಂಗೇರಿ ಕ್ಷೇತ್ರದಲ್ಲಿ ಅತಿ ಕಡಿಮೆ 10,183 ಪ್ರಕರಣಗಳು ಕಂಡುಬಂದಿವೆ.

Edited By : PublicNext Desk
PublicNext

PublicNext

06/08/2026 05:17 pm

Cinque Terre

4.54 K

Cinque Terre

0