ಬೆಂಗಳೂರು : ನಗರದ ಕ್ಯಾನಿಂಗ್ ಹ್ಯಾಮ್ ರಸ್ತೆಯಲ್ಲಿ ಹಾಕಲಾಗಿದ್ದ ನೂತನ ಸಚಿವರ ಅಭಿನಂದನಾ ಪೋಸ್ಟರ್ ಗಳಲ್ಲಿ ಕೊಲೆ ಬೆದರಿಕೆ ಬರಹಗಳನ್ನು ಬರೆಯಲಾಗಿದೆ. ಶಾಸಕ ರಿಜ್ವಾನ್ ಅರ್ಷದ್ ಗೆ ಶುಭಕೋರಲು ಅಳವಡಿಸಲಾಗಿದ್ದ ಪ್ಲೆಕ್ಸ್‌ಗಳ ಮೇಲೆ ಕಿಡಿಗೇಡಿಗಳು ಸಿಎಂ ಡಿ.ಕೆ. ಶಿವಕುಮಾರ್ ಮತ್ತು ರಿಜ್ವಾನ್ ಅರ್ಷದ್ ವಿರುದ್ಧ ಬಹಿರಂಗವಾಗಿಯೇ ಕೊಲೆ ಬೆದರಿಕೆ ಬರಹಗಳನ್ನು ಬರೆದಿದ್ದಾರೆ.
ದೇವರ ಹೆಸರುಗಳನ್ನು ಬಳಸಿ ಈ ರೀತಿಯ ಅವಹೇಳನಕಾರಿ ಹಾಗೂ ಬೆದರಿಕೆಯ ಸಂದೇಶಗಳನ್ನು ಬರೆದಿರುವುದು ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ. 'ಕೊಲೆಗಾರ ಡಿಕೆಶಿ, ನಿನ್ನ ಸಾವು ನನ್ನಿಂದ - ಶ್ರೀಕೃಷ್ಣ' ಎಂದು ಡಿ.ಕೆ. ಶಿವಕುಮಾರ್ ಅವರಿಗೆ ಬೆದರಿಕೆ ಹಾಕಿದ್ದರೆ, 'ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೆ ನಿನ್ನ ಸಾವು ಖಚಿತ - ಅಲ್ಲಾ' ಎಂದು ರಿಜ್ವಾನ್ ಅರ್ಷದ್ ಅವರ ಹೆಸರನ್ನು ಉಲ್ಲೇಖಿಸಿ ಬರೆಯಲಾಗಿದೆ.
ಈ ಘಟನೆಯು ರಾಜಕೀಯ ವಲಯದಲ್ಲಿ ಮತ್ತು ಸ್ಥಳೀಯವಾಗಿ ದೊಡ್ಡ ಸಂಚಲನ ಸೃಷ್ಟಿಸಿದ್ದು, ಕೃತ್ಯ ಎಸಗಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.
PublicNext
06/08/2026 07:04 pm
LOADING...