ಬೆಂಗಳೂರು: KPSC ನಡೆಸಿದ 400 ಪಶುವೈದ್ಯಾಧಿಕಾರಿ ಹುದ್ದೆಗಳ Recruitment ನಲ್ಲಿ ನಡೆದ OMR Sheet tampering ಹಾಗೂ ಬರೋಬ್ಬರಿ ₹80 ಲಕ್ಷ ಲಂಚದ 'ಬ್ರಹ್ಮಾಂಡ ಭ್ರಷ್ಟಾಚಾರ'ವನ್ನು ಖಂಡಿಸಿ, ಪ್ರಕರಣವನ್ನು ತಕ್ಷಣವೇ CBI Investigation ಗೆ ವಹಿಸಬೇಕೆಂದು ಆಗ್ರಹಿಸಿ ABVP 'ವಿಧಾನಸೌಧ ಚಲೋ' ಬೃಹತ್ ಪ್ರತಿಭಟನೆ ನಡೆಸಿತು. ಫ್ರೀಡಂ ಪಾರ್ಕ್‌ನಲ್ಲಿ 3 ದಿನ ಧರಣಿ ನಡೆಸಿದರೂ ಸರ್ಕಾರ ಯಾವುದೇ ಸ್ಪಂದನೆ ನೀಡದ ಹಿನ್ನೆಲೆಯಲ್ಲಿ ಉದ್ಯೋಗ ಆಕಾಂಕ್ಷಿ ಯುವಜನತೆ ರಸ್ತೆಗೆ ಇಳಿದಿದ್ದು, ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ತಡೆದ ಪೋಲೀಸರು ಅವರನ್ನು ತಮ್ಮ ವಶಕ್ಕೆ ಪಡೆದುಕೊಂಡರು.
ಈ ಸಂದರ್ಭದಲ್ಲಿ ಪೋಲೀಸರ ವಶದಲ್ಲಿದ್ದ ಗಾಯಗೊಂಡ ವಿದ್ಯಾರ್ಥಿಗಳಿಗೆ Expired First Aid Kit (ದಿನಾಂಕ ಮುಗಿದ ಪ್ರಥಮ ಚಿಕಿತ್ಸಾ ಸಾಮಗ್ರಿ) ನೀಡಿರುವುದು ಖಾಕಿ ಸಿಬ್ಬಂದಿಯ ಹಾಗೂ ಸರ್ಕಾರದ ಜವಾಬ್ದಾರಿರಹಿತ ವರ್ತನೆಯನ್ನು ಬಯಲುಗೊಳಿಸಿದೆ. ಒಂದು ಕಡೆ KPSC Scam ನಿಂದ ಲಕ್ಷಾಂತರ ಅಭ್ಯರ್ಥಿಗಳ Future ಹಾಳಾಗಿದ್ದರೆ, ಇನ್ನೊಂದೆಡೆ ಪೋಲೀಸರ ವಶದಲ್ಲಿ ವಿದ್ಯಾರ್ಥಿಗಳ Safety ಯನ್ನೂ ಗಾಳಿಗೆ ತೂರಲಾಗಿದೆ.
PublicNext
26/08/2026 12:53 pm
LOADING...