ಬೆಂಗಳೂರು: ಕೋರಮಂಗಲ ಪೊಲೀಸ್ ಠಾಣೆಯ ಮುಂಭಾಗದಲ್ಲೇ ಐಷಾರಾಮಿ ಆಡಿ ಕಾರಿನಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ಬೆಳಗಿನ ಜಾವ ವರದಿಯಾಗಿದೆ. ಮೃತರನ್ನು 'ಅಕ್ಬರ್' ಎಂದು ಗುರುತಿಸಲಾಗಿದೆ.
ರಾತ್ರಿ ಸುಮಾರು 1 ಗಂಟೆಯ ವೇಳೆಗೆ ಈ ಕಾರು ಠಾಣೆಯ ಎದುರಿನ ಫಾಸ್ಟ್ ಫುಡ್ ಹೋಟೆಲ್ ಬಳಿ ಬಂದು ನಿಂತಿತ್ತು. ಬೆಳಿಗ್ಗೆ ಗಮನಿಸಿದಾಗ ಕಾರಿನೊಳಗೆ ವ್ಯಕ್ತಿಯು ಶವವಾಗಿ ಬಿದ್ದಿರುವುದು ಕಂಡುಬಂದಿದೆ.
ಸ್ಥಳಕ್ಕೆ ಧಾವಿಸಿದ ಸೋಕೋ ತನಿಖಾ ತಂಡ ಹಾಗೂ ಕೋರಮಂಗಲ ಪೊಲೀಸ್ ಸಿಬ್ಬಂದಿ ಕಾರು ಮತ್ತು ಮೃತದೇಹದ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಚಾಲನೆ ಮಾಡುತ್ತಿದ್ದಾಗ ಹಾರ್ಟ್ ಅಟ್ಯಾಕ್ ಸಂಭವಿಸಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಮೃತ ಅಕ್ಬರ್ ಅವರ ಪೂರ್ಣ ಹಿನ್ನೆಲೆ ಹಾಗೂ ಅವರು ರಾತ್ರಿ ಎಲ್ಲಿಗೆ ಹೊರಟಿದ್ದರು ಎಂಬುದರ ಕುರಿತು ಕೋರಮಂಗಲ ಪೊಲೀಸರು ಪ್ರಸ್ತುತ ಮಾಹಿತಿ ಸಂಗ್ರಹಿಸುತ್ತಿದ್ದು, ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.
PublicNext
20/09/2026 03:58 pm
LOADING...