ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬೈಕ್ ಗಲಾಟೆ ವಿಕೋಪಕ್ಕೆ ಗರ್ಭಿಣಿಯ ಮೇಲೆ ಹಲ್ಲೆ, ಅವಳಿ ಭ್ರೂಣ ಬಲಿ

ಬೆಂಗಳೂರು: ಕ್ಷುಲ್ಲಕ ಬೈಕ್ ವಿಚಾರವಾಗಿ ಸಂಬಂಧಿಕರ ನಡುವೆ ನಡೆದ ಗಲಾಟೆಯಲ್ಲಿ 6 ತಿಂಗಳ ಗರ್ಭಿಣಿಯೊಬ್ಬರು ತಮಗಿದ್ದ ಅವಳಿ ಭ್ರೂಣಗಳನ್ನು ಕಳೆದುಕೊಂಡ ಘಟನೆ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಯಾಸಿನ್ ಹಾಗೂ ಜಾಫರ್ ಕುಟುಂಬಗಳ ನಡುವೆ ಬೈಕ್ ನಿಲ್ಲಿಸುವ ವಿಚಾರಕ್ಕೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ ಮಾರಾಮಾರಿಯಾಗಿದೆ. ಈ ವೇಳೆ ಜಾಫರ್ ಮಗಳು ತಾನಿಯಾ ಸಿದ್ದಿಕಿ ಅವರ ಮೇಲೆಯೂ ಹಲ್ಲೆ ನಡೆದಿದ್ದು, ಹೊಟ್ಟೆಗೆ ತೀವ್ರ ಪೆಟ್ಟು ಬಿದ್ದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಅವಳಿ ಭ್ರೂಣಗಳು ಗರ್ಭಪಾತವಾಗಿವೆ.

ತಮ್ಮ ಕರುಳ ಕುಡಿಗಳನ್ನು ಕಳೆದುಕೊಂಡ ತಾನಿಯಾ ಮತ್ತು ಕುಟುಂಬಸ್ಥರು ಕಣ್ಣೀರು ಹಾಕುತ್ತಾ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೊತ್ತನೂರು ಠಾಣೆ ಪೊಲೀಸರು ಎರಡೂ ಕಡೆಯಿಂದ ದೂರು ಪಡೆದು ಕೌಂಟರ್ ಕೇಸ್ ದಾಖಲಿಸಿಕೊಂಡಿದ್ದಾರೆ. ಆದರೆ, ಗರ್ಭಿಣಿ ಮಗುವನ್ನು ಕಳೆದುಕೊಂಡ ಗಂಭೀರ ಪ್ರಕರಣವನ್ನು ಪೊಲೀಸರು ಕೇವಲ ಎನ್‌ಸಿಆರ್ ಮಾಡಿ ನಿರ್ಲಕ್ಷಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Edited By : Vinayak Patil
PublicNext

PublicNext

20/09/2026 04:01 pm

Cinque Terre

1.33 K

Cinque Terre

0

ಸಂಬಂಧಿತ ಸುದ್ದಿ