ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಗರಭಾವಿ ಔಟರ್ ರಿಂಗ್ ರೋಡ್‌ನಲ್ಲಿ ಭೀಕರ ಅಪಘಾತ: ತಡರಾತ್ರಿ ಒಂದಲ್ಲ ಎರಡಲ್ಲ ಮೂರು ಅಪಘಾತ!

ಬೆಂಗಳೂರು: ನಗರದ ನಾಗರಭಾವಿ ಔಟರ್ ರಿಂಗ್ ರೋಡ್‌ನಲ್ಲಿ ತಡರಾತ್ರಿ ಕೇವಲ 500 ಮೀಟರ್ ಅಂತರದಲ್ಲಿ ಮೂರು ಪ್ರತ್ಯೇಕ ಭೀಕರ ಅಪಘಾತಗಳು ಸಂಭವಿಸಿವೆ.

ಮೊದಲ ಘಟನೆಯಲ್ಲಿ, ವ್ಹೀಲಿಂಗ್ ಪುಂಡರನ್ನು ತಪ್ಪಿಸಲು ಹೋಗಿ ಟಿಟಿ ವಾಹನವೊಂದು ಅಪಘಾತಕ್ಕೀಡಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಐವರು ತೀವ್ರವಾಗಿ ಗಾಯಗೊಂಡಿದ್ದಾರೆ. ಎರಡನೇ ಘಟನೆಯಲ್ಲಿ, ಬೆಳಗಿನ ಜಾವ ಅಪಾರ್ಟ್‌ಮೆಂಟ್‌ಗೆ ತಿಂಡಿ ಸಾಗಿಸುತ್ತಿದ್ದ ಫುಡ್ ಟ್ರಕ್‌ಗೆ ಖಾಸಗಿ ಬಸ್ ಹಿಂಬದಿಯಿಂದ ಬಲವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಫುಡ್ ಟ್ರಕ್ ರಸ್ತೆಯಲ್ಲೇ ಮಗುಚಿ ಬಿದ್ದಿದೆ.

ಮೂರನೇ ಅಪಘಾತದಲ್ಲಿ, ವಿಜಯನೇತ್ರ ಅಂಡರ್‌ಪಾಸ್ ಬಳಿ ವೇಗವಾಗಿ ಬಂದ ಕ್ಯಾಂಟರ್ ಲಾರಿಯೊಂದು ನೇರವಾಗಿ ವಾಲ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕ್ಯಾಂಟರ್ ಅಂಡರ್‌ಪಾಸ್ ಬ್ರಿಡ್ಜ್‌ನ ಮೇಲ್ಭಾಗದಲ್ಲಿ ತೂಗಾಡುವಂತೆ ನಿಂತು ಭೀತಿ ಸೃಷ್ಟಿಸಿತ್ತು. ಘಟನೆಯಲ್ಲಿ ತಡೆಗೋಡೆಯ ಸಿಮೆಂಟ್ ಕಂಬಿಗಳು ಸಂಪೂರ್ಣವಾಗಿ ಒಡೆದು ಕೆಳಗೆ ಬಿದ್ದಿದ್ದವು. ತಡರಾತ್ರಿಯಾಗಿದ್ದರಿಂದ ಕೆಳಭಾಗದಲ್ಲಿ ಸಾರ್ವಜನಿಕರ ಸಂಚಾರವಿರಲಿಲ್ಲ. ಹೀಗಾಗಿ ದೊಡ್ಡ ಅನಾಹುತವೊಂದು ಅದೃಷ್ಟವಶಾತ್ ತಪ್ಪಿದೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Edited By :
PublicNext

PublicNext

20/09/2026 12:32 pm

Cinque Terre

2.83 K

Cinque Terre

0

ಸಂಬಂಧಿತ ಸುದ್ದಿ