ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ಮತದಾರರೇ ಗಮನಿಸಿ; ಸೆ.19–20ರಂದು SIR ವಿಶೇಷ ನೋಂದಣಿ ಅಭಿಯಾನ

ಬೆಂಗಳೂರು:ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮಾನ್ಯ ಮುಖ್ಯ ಆಯುಕ್ತರು ಮತ್ತು ಜಿಲ್ಲಾ ಚುನಾವಣಾಧಿಕಾರಿ-ಬೆಂಗಳೂರು

ಎಂ. ಮಹೇಶ್ವರ್ ರಾವ್‌ ರವರು ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿ- ಉತ್ತರ ಮತ್ತು ಬೆಂಗಳೂರು ಉತ್ತರ ನಗರ ಪಾಲಿಕೆ (BNCC) ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ರವರು ಇಂದು, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಸಂಬಂಧಿಸಿದಂತೆ ಜಿಲ್ಲಾ ಚುನಾವಣಾಧಿಕಾರಿ -ಬೆಂಗಳೂರು ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 19 ಮತ್ತು 20ರಂದು ನಡೆಯಲಿರುವ ವಿಶೇಷ ನೋಂದಣಿ ಅಭಿಯಾನ ಕುರಿತಂತೆ ವಾಹನ ಪ್ರಚಾರ ಕಾರ್ಯಕ್ರಮಕ್ಕೆ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ (ಬೆಂ.ಪ

ನ.ಪಾ.) ವ್ಯಾಪ್ತಿಯಲ್ಲಿರುವ ಜಲಮಂಡಳಿಯ ಸುವರ್ಣ ಭವನದ ಮುಂಭಾಗದಲ್ಲಿ ಜಾಗೃತಿ ಕರಪತ್ರ ಬಿಡುಗಡೆಗೊಳಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಅಪರ ಆಯುಕ್ತರು (BNCC) ಶ್ರೀಮತಿ ಕೆ.ಆರ್. ಪಲ್ಲವಿ, ಮತದಾರರ ನೋಂದಣಾಧಿಕಾರಿ ಶ್ರೀ ಎಂ. ಶ್ರೀನಿವಾಸ, ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಇತರ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

ಚೆಂಡೆವಾದನ ತಂಡ ಹಾಗೂ ಪ್ರಚಾರ ಆಟೋಗಳ ಜೊತೆಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಾಥಾ ನಡೆಸಿ, ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಜಾಗೃತಿ ಕರಪತ್ರ ವಿತರಿಸಿ ಅರಿವು ಮೂಡಿಸಲಾಯಿತು.

ಎರಡು ದಿನಗಳ ಕಾಲ ನಡೆಯಲಿರುವ ವಿಶೇಷ ನೋಂದಣಿ ಅಭಿಯಾನದಲ್ಲಿ ಜಿಲ್ಲಾ ಚುನಾವಣಾಧಿಕಾರಿ-ಬೆಂಗಳೂರು ವ್ಯಾಪ್ತಿಯ ಮತಗಟ್ಟೆಗಳಲ್ಲಿ, ಮತದಾರ ನೋಂದಣಾಧಿಕಾರಿ, ಸಹಾಯಕ ಮತದಾರ ನೋಂದಣಾಧಿಕಾರಿಗಳ ಕಛೇರಿ, ಕಂದಾಯ ವಾರ್ಡ್ ಕಚೇರಿಗಳಲ್ಲಿ ಸಾರ್ವಜನಿಕರು, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು, ವಿಳಾಸ ಮತ್ತು ಇತರ ವಿವರ ಪರಿಶೀಲನೆ, ತಿದ್ದುಪಡಿ, ಹೆಸರು ನೋಂದಣಿ ಸೇರಿದಂತೆ ಎಸ್ ಐ ಆರ್ ಸಂಬಂಧಿಸಿದ ಮಾಹಿತಿ ಪಡೆಯುವುದರ ಜೊತೆಗೆ, ತಿದ್ದುಪಡಿಗಳನ್ನು ಮಾಡಿಸಬಹುದಾಗಿದೆ. ಈ ಕುರಿತಂತೆ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 7 ಆಟೋರಿಕ್ಷಾಗಳ ಮುಖೇನ ವ್ಯಾಪಕ ಪ್ರಚಾರ ಪ್ರಚಾರ ನಡೆಯಲಿದೆ.

Edited By :
PublicNext

PublicNext

19/09/2026 07:10 pm

Cinque Terre

3.97 K

Cinque Terre

0

ಸಂಬಂಧಿತ ಸುದ್ದಿ