ಅಣ್ಣಿಗೇರಿ: ಪಿಎಂ ಕಿಸಾನ್ (PM-KISAN) ಯೋಜನೆಯ ಹಣಕಾಸಿನ ನೆರವು ಪಡೆಯಲು ರೈತರು 'ಇ-ಕೆವೈಸಿ' (e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದ್ದು, ಬಯೋಮೆಟ್ರಿಕ್ ಅಥವಾ ಫೇಸ್ ಆಧಾರಿತ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಅಣ್ಣಿಗೇರಿಯ ತಾಲೂಕು ಕೃಷಿ ಅಧಿಕಾರಿ ವೀರಣ್ಣ ಗಡಾದ ತಿಳಿಸಿದ್ದಾರೆ.
ಪ್ರಸ್ತುತ ಅಣ್ಣಿಗೇರಿ ತಾಲೂಕಿನಲ್ಲಿ ಒಟ್ಟು 10,093 ರೈತರ ಇ-ಕೆವೈಸಿ ಪ್ರಕ್ರಿಯೆ ಬಾಕಿ ಇದ್ದು, ಯೋಜನೆಯ ಮುಂದಿನ ಕಂತಿನ ಹಣ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ಇ-ಕೆವೈಸಿ ಮಾಡಿಸಿಕೊಳ್ಳಲು ಲಭ್ಯವಿರುವ ಮಾರ್ಗಗಳು:
ಸೇವಾ ಕೇಂದ್ರಗಳು: ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಸಾಮಾನ್ಯ ಸೇವಾ ಕೇಂದ್ರ (CSC) ಅಥವಾ ರೈತ ಸಂಪರ್ಕ ಕೇಂದ್ರಗಳಲ್ಲಿ ಬಯೋಮೆಟ್ರಿಕ್ (ಬೆರಳಚ್ಚು) ಆಧಾರಿತ ಇ-ಕೆವೈಸಿ ಮಾಡಿಸಿಕೊಳ್ಳಬಹುದು.
ಮೊಬೈಲ್ ಆ್ಯಪ್ (ಮುಖ ಗುರುತಿಸುವಿಕೆ): ಬೆರಳಚ್ಚು ಮೂಲಕ ದೃಢೀಕರಣ ಸಾಧ್ಯವಾಗದ ಫಲಾನುಭವಿಗಳು ‘PM-KISAN’ ಹಾಗೂ ಆಧಾರ್ ಫೇಸ್ ಆರ್‍ಡಿ (‘Aadhaar Face RD’) ಆ್ಯಪ್‌ಗಳನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಂಡು, ಫೇಸ್ ಆಧಾರಿತ ಸ್ವಯಂ ಇ-ಕೆವೈಸಿ ಮಾಡಿಕೊಳ್ಳಬಹುದು.
ರೈತರು ಈ ಕೂಡಲೇ ಹತ್ತಿರದ ಸೇವಾ ಕೇಂದ್ರ ಅಥವಾ ತಮ್ಮ ಗ್ರಾಮ ಪಂಚಾಯಿತಿಯ ಕೃಷಿ ಸಖಿಯರನ್ನು ಸಂಪರ್ಕಿಸಿ ಯೋಜನೆಯ ಸೌಲಭ್ಯ ಪಡೆಯಬೇಕೆಂದು ಅವರು ಮನವಿ ಮಾಡಿದ್ದಾರೆ.
Kshetra Samachara
07/09/2026 05:31 pm
LOADING...