ಬೆಂಗಳೂರು: ಸಿಎಂ ಡಿ.ಕೆ. ಶಿವಕುಮಾರ್ ಮಂಗಳವಾರ ಮುಂಜಾನೆ 7 ಗಂಟೆಗೆ ಯಶವಂತಪುರದ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈರುಳ್ಳಿ ಮಂಡಿಗೆ ಭೇಟಿ ನೀಡಿದ, ಸ್ಥಳೀಯ ವರ್ತಕರು, ರೈತರು ಮತ್ತು ಕೂಲಿಕಾರರೊಂದಿಗೆ ಕುಳಿತು ಸಮಸ್ಯೆ ಆಲಿಸಿದರು.
ಮಾರುಕಟ್ಟೆ ಪರಿಶೀಲನೆ ವೇಳೆ ರಸ್ತೆ ಬದಿಯ ಸಣ್ಣ ಹೋಟೆಲ್‌ಗೆ ತೆರಳಿದ ಡಿಕೆಶಿ ಅಲ್ಲಿನ ಕೂಲಿ ಕಾರ್ಮಿಕರ ಜೊತೆಯಲ್ಲೇ ಕುಳಿತು ಇಡ್ಲಿಬಸೇವಿಸಿದರು. ಈ ವೇಳೆ ತಮ್ಮೊಂದಿಗೆ ಕುಳಿತಿದ್ದ ಕೂಲಿಕಾರರ ಉಪಹಾರದ ಬಿಲ್ ಕೂಡ ಪಾವತಿಸಿದರು. ಹೋಟೆಲ್ ಮಾಲೀಕರಿಗೆ 500 ರೂ. ನೀಡಿ ಇವರ ಬಳಿ ಹಣ ಪಡೆಯಬೇಡಿ ಎಂದು ಹೇಳಿದರು.
PublicNext
08/09/2026 01:17 pm
LOADING...