ಬೆಳ್ತಂಗಡಿ: ಹೆಬ್ಬಾವನ್ನು ಇಡೀ ನುಂಗಿದ ಸ್ಥಿತಿಯಲ್ಲಿದ್ದ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ರಕ್ಷಕರೊಬ್ಬರು ಸುರಕ್ಷಿತವಾಗಿ ರಕ್ಷಿಸಿ, ಅರಣ್ಯಕ್ಕೆ ಬಿಟ್ಟ ಘಟನೆ ತಾಲ್ಲೂಕಿನ ತೆಂಕರಂದೂರು ಗ್ರಾಮದ ಕಡಿಂಗ ಎಂಬಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಹಿತೇಶ್ ಎಂಬವರ ತೋಟದಲ್ಲಿ ಶುಕ್ರವಾರ ಸಂಜೆ ಬೃಹತ್ ಗಾತ್ರದ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿತ್ತು. ಈ ಕಾಳಿಂಗ ಸರ್ಪವು ಹೆಬ್ಬಾವನ್ನು ನುಂಗಿರುವುದು ಕಂಡುಬಂದ ತಕ್ಷಣ, ಮನೆಯವರು ಲಾಯಿಲದ ಪ್ರಸಿದ್ಧ ಉರಗಮಿತ್ರ 'ಸ್ನೇಕ್ ಅಶೋಕ್' ಅವರಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಧಾವಿಸಿದ ಸ್ನೇಕ್ ಅಶೋಕ್, ಸ್ಥಳೀಯರಿಗೆ ಯಾವುದೇ ಅಪಾಯವಾಗದಂತೆ ಜಾಗ್ರತೆ ವಹಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಕಾರ್ಯಾಚರಣೆಯ ವೇಳೆ ಕಾಳಿಂಗ ಸರ್ಪವು ತನ್ನ ಹೊಟ್ಟೆಯಲ್ಲಿದ್ದ ಹೆಬ್ಬಾವನ್ನು ವಾಂತಿ ಮಾಡಿ ಹೊರಹಾಕಿತು. ತಕ್ಷಣವೇ ಕಾಳಿಂಗ ಸರ್ಪವನ್ನು ಕ್ಷೇಮವಾಗಿ ಹಿಡಿದ ಉರಗ ರಕ್ಷಕ, ಬಳಿಕ ಅದನ್ನು ಸುರಕ್ಷಿತವಾಗಿ ಕಾಡಿಗೆ ತಲುಪಿಸಿದರು.
PublicNext
11/09/2026 10:42 pm
LOADING...