ಯಾದಗಿರಿ: ಮಳೆ ಕೈಕೊಟ್ಟು ಬೆಳೆ ಹಾಳಾಗಿರುವ ಹಿನ್ನೆಲೆ ಗ್ರಾಮೀಣ ಭಾಗದ ಕೃಷಿ ಕೂಲಿ ಕಾರ್ಮಿಕರು ಮಹಾನಗರಗಳತ್ತ ವಲಸೆ ಹೋಗುತ್ತಿರುವುದು ಹೆಚ್ಚಾಗಿದೆ. ಇದನ್ನು ತಡೆಯುವ ಉದ್ದೇಶದಿಂದ ಯಾದಗಿರಿ ತಾಲೂಕಿನ ಠಾಣಗುಂದಿ ತಾಂಡಾದಲ್ಲಿ ವಿಬಿಜಿ ರಾಮ್ ಜಿ ಯೋಜನೆ ಕುರಿತು ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಗ್ರಾಮದಲ್ಲೇ ಉದ್ಯೋಗ ಪಡೆದು ವಲಸೆ ತಪ್ಪಿಸುವಂತೆ ಕಾರ್ಮಿಕರಿಗೆ ಮನವಿ ಮಾಡಲಾಯಿತು. ಇದೇ ವೇಳೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೀವ್, ಸೂಕ್ತ ದಾಖಲೆಗಳೊಂದಿಗೆ ಜಾಬ್ ಕಾರ್ಡ್ ಪಡೆದು, ಇ-ಕೆವೈಸಿ ಪೂರ್ಣಗೊಳಿಸಿ ಯೋಜನೆಯಡಿ ದಿನಗೂಲಿ ಕೆಲಸ ಪಡೆಯುವಂತೆ ಕರೆ ನೀಡಿದ್ದು, ಗ್ರಾಮದಲ್ಲಿ ಅಭಿಯಾನ ಚುರುಕು ಪಡೆದುಕೊಂಡಿದೆ.
PublicNext
14/09/2026 01:59 pm
LOADING...