ಸುರಪುರ: ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನೆಲೆಯನ್ನು ಹೊಂದಿರುವ ಸುರಪುರದ ಶ್ರೀ ವೇಣುಗೋಪಾಲ ಸ್ವಾಮಿ ಜಾತ್ರೆಯು ಶನಿವಾರ ಸಂಜೆ ವೇಳೆ ಭಕ್ತಿಭಾವದ ಜೊತೆಗೆ ಸಂಭ್ರಮ ಸಡಗರದಿಂದ ನಡೆಯಿತು.
ವೇಣುಗೋಪಾಲ ಸ್ವಾಮಿ ದೇವಸ್ಥಾನದ ಆವರಣದಲ್ಲಿ ದೊಡ್ಡದಾದ ನಾಲ್ಕು ಕಂಬಗಳು ಹಾಕಿದ್ದು, ನಾ ಮುಂದು ತಾ ಮುಂದು ಎನ್ನುತ್ತಾ ಒಬ್ಬರಿಗೊಬ್ಬರು ನೀರು ಆಟ ಆಡಿ ಅಲಿಗೆ ಸದ್ದಿಗೆ ಹೆಜ್ಜೆ ಹಾಕುತ್ತಾ ಕಂಬ ಏರಲು ಹರಸಾಹಸಪಡುತ್ತಾ ಕಂಬದ ತುದಿ ಮುಟ್ಟಿ ಕಟ್ಟಿದ ಬಾಳೆ ಹರಿದರು.
ಇನ್ನೂ ಜಾತ್ರೆಗೆ ಸುರಪುರ ನಗರ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳು ಹಾಗೂ ವಿವಿಧ ಜಿಲ್ಲೆಗಳಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ವೇಣುಗೋಪಾಲ ಸ್ವಾಮಿಯ ದರ್ಶನ ಪಡೆದು ತಮ್ಮ ಇಷ್ಟಾರ್ಥಗಳನ್ನು ಸಲ್ಲಿಸಿದರು.
ಬೆಳಗ್ಗೆಯಿಂದಲೇ ದೇವಸ್ಥಾನದ ಸುತ್ತಮುತ್ತ ಭಕ್ತರ ದಂಡೇ ಕಂಡುಬಂತು. ದೇವರ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತ ದೇವರ ದರ್ಶನ ಪಡೆದು ಪುನೀತರಾದರು.
ದೇವಸ್ಥಾನವನ್ನು ವಿದ್ಯುತ್ ದೀಪಗಳಿಂದ ವಿಶೇಷ ಅಲಂಕಾರ ಮಾಡಿದ್ದು, ಭಕ್ತರು ದೇಗುಲದ ಮುಂದೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರುವುದು ಗಮನ ಸೆಳೆಯಿತು.
ಇನ್ನೂ ಕಂಬ ಹರಿದ ನಂತರ ವಿಶೇಷವಾಗಿ ಶ್ರೀ ವೇಣುಗೋಪಾಲ ಸ್ವಾಮಿಯ ಉತ್ಸವ ಮೂರ್ತಿಯ ಮೆರವಣಿಗೆ ಭಕ್ತರ ಪ್ರಮುಖ ಆಕರ್ಷಣೆಯಾಗಿತ್ತು.
ಇನ್ನೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಸುರಪುರ ಪೊಲೀಸ್ ಇಲಾಖೆಯ ಸಿಪಿಐ ಹಾಗೂ ಸಿಬ್ಬಂದಿ ಭದ್ರತಾ ವ್ಯವಸ್ಥೆ ಕೈಗೊಂಡಿದ್ದರು.
ಒಟ್ಟಿನಲ್ಲಿ ಸುರಪುರದ ಶ್ರೀ ವೇಣುಗೋಪಾಲ ಸ್ವಾಮಿ ಜಾತ್ರೆಯಲ್ಲಿ ಸಾಹಸಮಯ ಕಂಬ ಏರೋದು ಕಣ್ತುಂಬಿಕೊಂಡು ಜಾತ್ರೆಯಲ್ಲಿ ಮಿಂದೆದ್ದರು.
---
ವರದಿ: ಮೌನೇಶ ಬಿ. ಮಂಗಿ ಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
06/09/2026 07:58 am
LOADING...