ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

5 ಸಾವಿರ ದೀಪಗಳಿಂದ ಕಂಗೊಳಿಸಿದ ದೇಕಿಯಾಜುಲಿ; ಪ್ರಧಾನಿ ಮೋದಿ ಜನ್ಮದಿನಾಚರಣೆ

ಅಸ್ಸಾಂ: ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಜನ್ಮದಿನದ ಅಂಗವಾಗಿ ಅಸ್ಸಾಂನ ದೇಕಿಯಾಜುಲಿಯಲ್ಲಿರುವ ಹಿಂದೂ ವೈದಿಕ ಕ್ಷೇತ್ರದಲ್ಲಿ 5 ಸಾವಿರ ದೀಪಗಳನ್ನು ಬೆಳಗಿಸಿ ವಿಶೇಷವಾಗಿ ಆಚರಿಸಲಾಯಿತು.

ಪ್ರಧಾನಿ ಮೋದಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ದೀಪಗಳ ಬೆಳಕಿನಿಂದ ವೈದಿಕ ಕ್ಷೇತ್ರ ಕಂಗೊಳಿಸಿತು. 5,000 ಶುಭ ದೀಪಗಳನ್ನು ಬೆಳಗಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತವಾಗುತ್ತಿದೆ.

ದೀಪಗಳ ಬೆಳಕಿನಿಂದ ಇಡೀ ಪ್ರದೇಶ ಕಂಗೊಳಿಸಿದ ದೃಶ್ಯಗಳು ಗಮನ ಸೆಳೆದಿದ್ದು, ಪ್ರಧಾನಿ ಮೋದಿ ಅವರ ಜನ್ಮದಿನದ ಅಂಗವಾಗಿ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ತಿಳಿಸಲಾಗಿದೆ.

Edited By :
PublicNext

PublicNext

17/09/2026 09:53 pm

Cinque Terre

26 K

Cinque Terre

7

ಸಂಬಂಧಿತ ಸುದ್ದಿ