ಬೆಂಗಳೂರು: ಸುಂಕದಕಟ್ಟೆಯ ಅಯ್ಯಪ್ಪ ಸರ್ಕಲ್ ಬಳಿ ಗೌರಿ-ಗಣೇಶ ಹಬ್ಬದ ಮಧ್ಯಾಹ್ನ ತೀವ್ರ ಆಘಾತಕಾರಿ ಘಟನೆಯೊಂದು ನಡೆದಿದೆ. ಮನೆಯ ಮೂರನೇ ಮಹಡಿಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು 6 ವರ್ಷದ ವಿನೀಶ್ ಎಂಬ ಮಗುವಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.
ತಕ್ಷಣವೇ ಮಗುವನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯು (ICU) ವಿಭಾಗದಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಬಾಲಕ ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ಮಗುವಿನ ಸಂಪೂರ್ಣ ಚೇತರಿಕೆಗೆ ಸುದೀರ್ಘ ಹಾಗೂ ವೆಚ್ಚದಾಯಕ ಚಿಕಿತ್ಸೆಯ ಅಗತ್ಯವಿದೆ.
ವಿನಿಶ್ ತಂದೆ ಶ್ರೀನಿವಾಸ್ ಕ್ಯಾಬ್ ಚಾಲಕರಾಗಿದ್ದು ಬಡ ಕುಟುಂಬದ ಪೋಷಕರು ಆಸ್ಪತ್ರೆಯ ಬೃಹತ್ ವೆಚ್ಚವನ್ನು ಭರಿಸಲಾಗದೆ ಕಂಗಾಲಾಗಿದ್ದಾರೆ. ಮಗುವಿನ ಪ್ರಾಣ ಉಳಿಸಲು ಧನಸಹಾಯ ಮಾಡುವಂತೆ ಸಾರ್ವಜನಿಕರಲ್ಲಿ ಕಣ್ಣೀರ ಮನವಿ ಮಾಡಿದ್ದಾರೆ. ಸಹಾಯ ಮಾಡಲು ಇಚ್ಛಿಸುವ ಉದಾರಿಗಳು ನೀಡಿರುವ ಕ್ಯೂಆರ್ (QR) ಕೋಡ್ ಮೂಲಕ ಹಣ ರವಾನಿಸಿ ಈ ಕುಟುಂಬಕ್ಕೆ ಆಸರೆಯಾಗಬಹುದು.
PublicNext
18/09/2026 10:18 am
LOADING...