ಬೆಂಗಳೂರು - ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನದ ಭಾಗವಾಗಿ ಸ್ವಚ್ಚಗೊಳಿಸಲಾಗಿರುವ ಹೆಬ್ಬಾಳ ಫ್ಲೈ ಓವರ್ ಸುತ್ತ ಮುತ್ತಲ ಪ್ರದೇಶದಲ್ಲಿ ಅಧಿಕಾರಿಗಳ ಜೊತೆಗೆ ಸ್ಥಳ ಪರಿಶೀಲಿಸಿದ ಸಚಿವ ಕೃಷ್ಣಭೈರೇಗೌಡ, ಈ ವೇಳೆ ತ್ಯಾಜ್ಯವನ್ನ ವಿಲೇವಾರಿ ಮಾಡದೇ ಇರೋದನ್ನ ಕಂಡು ಬಿಡಿಎ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು.
ನೀವು ಕೆಲಸ ಮಾಡೋದು ಜನರಿಗಾಗಿಯೇ? ಅಥವಾ ಕಾಂಟ್ರಾಕ್ಟರ್ ಗಳಿಗಾ ? ಎಂದು ಅಧಿಕಾರಿಗಳಿಗೆ ಪ್ರಶ್ನೆ ಮಾಡಿದರು.ಕೊನೆಗೆ ಆದಷ್ಟು ಬೇಗ ತ್ಯಾಜ್ಯವನ್ನ ತೆರವುಗೊಳಿಸುವಂತೆ ಜಿಬಿಎ ಅಧಿಕಾರಿಗಳಿವೆ ಸೂಚನೆ ನೀಡಿದ ಸಚಿವರು ಹೆಬ್ಬಾಳ ಫ್ಲೈ ಓವರ್ ಸುತ್ತಮುತ್ತಲಿನ ಪ್ರದೇಶಗಳನ್ನ ಸಾರ್ವಜನಿಕರ ಬಳಕೆಗೆ ಹೇಗೆ ಉಪಯೋಗಿಸಕೊಳ್ಳಬಹುದು, ಹಾಗೇ ಇಲ್ಲಿನ ಸ್ಥಳಗಳನ್ನ ಇನ್ನಷ್ಟು ರೀತಿಯಲ್ಲಿ ಹೇಗೆ ಅಭಿವೃದ್ಧಿ ಪಡಿಸಬಹುದು ಎಂದು ಸಚಿವ ಕೃಷ್ಣಭೈರೇಗೌಡ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿದ್ದಾರೆ.
PublicNext
18/09/2026 05:01 pm
LOADING...